ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಚಿಣ್ಣರ ವನಕ್ಕೆ ಸಾಕ್ಷಿಯಾದ ಶಾಲಾ ಮಕ್ಕಳು!

ಅಳ್ನಾವರ: ಅರಣ್ಯ ಇಲಾಖೆಯು ಮಕ್ಕಳಲ್ಲಿ ಅರಣ್ಯ ಮತ್ತು ಪರಿಸರದ ಅರಿವು ಮತ್ತು ಜಾಗೃತಿ ಮೂಡಿಸುವ ಮಹತ್ವದ ಯೋಜನೆಗಳಲ್ಲಿ ಒಂದಾದ 'ಚಿಣ್ಣರ ವನ ದರ್ಶನ' ಯೋಜನೆಯಡಿಯಲ್ಲಿ ಅಳ್ನಾವರ ಸರಕಾರಿ ಫ್ರೌಢ ಶಾಲೆಯ ಮಕ್ಕಳನ್ನು ದಾಂಡೇಲಿಯ ದಟ್ಟಡವಿಗೆ ಹಳಿಯಾಳ ವಲಯದ ವತಿಯಿಂದ ಕರೆದೊಯ್ಯಲಾಗಿತ್ತು.

ಕಾರ್ಯಕ್ರಮವನ್ನು ವಲಯ ಅರಣ್ಯಾಧಿಕಾರಿ ಶ್ರೀ ನರೇಶ್ ಜಿ ವಿ ಯವರು ಉದ್ಘಾಟಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಮೊದಲಿಗೆ ಕುರಿಗದ್ದಾ ನರ್ಸರಿಗೆ ಭೇಟಿ ನೀಡಿ ಬೀಜ, ಸಸಿಗಳನ್ನು ಬೆಳೆಸುವ ವಿವಿದ ಸಸಿಗಳ ವಿವರಣೆಯನ್ನು ಪಡೆಯುವುದರ ಜೊತೆಗೆ,ಬೋಮ್ಮನಹಳ್ಳಿ ಡ್ಯಾಂ ವೀಕ್ಷಣೆ,ನೀರು ಸಂಗ್ರಹಣೆ, ಸತ್ತಲಿನ ಅರಣ್ಯಕ್ಕೆ ಅದರ ಉಪಯೋಗವನ್ನು ತಿಳಿಸಿದರು.

ಅಂಬಿಕಾನಗರ ಸೈಕ್ಸ್ ವ್ಯೂವ್ ಪಾಯಿಂಟ್ ವಿಕ್ಷಣಾಗೋಪುರದಿಂದ ಕಾಳಿ ನದಿಯ ಸ್ವರ್ಗಸದೃಷ್ಯ ಸೌಂದರ್ಯ ಸವಿದ ಚಿನ್ನರು, ಅಲ್ಲಿನ ವಿದ್ಯುತ್ ಉತ್ಪಾದನಾ ಘಟಕದ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರಕಾಶ ಕಂಬಾರ,ಪ್ರವೀಣ ಪವಾರ,ಶಾಲೆಯ ಮಕ್ಕಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/06/2022 08:23 am

Cinque Terre

9.46 K

Cinque Terre

0

ಸಂಬಂಧಿತ ಸುದ್ದಿ