ಕುಂದಗೋಳ: ಕುಂದಗೋಳ ಪಟ್ಟಣದಿಂದ ಕಡಪಟ್ಟಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಎದುರಾಗುವ ರೈಲ್ವೆ ಟ್ರ್ಯಾಕ್ ನಿರ್ಮಾಣ ಆಗಿದೆ. ಇದಾದ ಬಳಿಕ ಇಲ್ಲಿ ವಾಹನ ಸವಾರರು ಸದಾ ನಾ ಮುಂದು ತಾ ಮುಂದು ಎಂದು ವಾಹನ ಚಲಾಯಿಸುತ್ತಾರೆ. ಆದರೆ, ವಾಹನ ಚಲಾಯಿಸುವ ವೇಳೆ ವಾಹನ ಸವಾರರು ಮಧ್ಯೆ ರೈಲ್ವೆ ಟ್ರ್ಯಾಕ್ ಮೇಲೆ ವಾಗ್ವಾದ ನಡೆದಿದೆ.
ಕಳೆದ ಹಲವಾರು ವರ್ಷಗಳಿಂದ ಮೇಲ್ದರ್ಜೆಗೆ ಏರದ ರೈಲ್ವೆ ಟ್ರ್ಯಾಕ್‌ನಿಂದಾಗಿ ನಿತ್ಯ ಗೇಟ್ ಹಾಕುವುದು ತೆರೆಯುವುದು ಮಾಮೂಲಾಗಿದೆ. ಹೀಗೆ ರೈಲ್ವೆ ಬಂದಾಗ ಗೇಟ್ ಹಾಕಿ ತೆರದ ಬಳಿಕ ವಾಹನಗಳ ಟ್ರಾಫಿಕ್ ಏರ್ಪಡುತ್ತದೆ. ಟ್ರ್ಯಾಕ್ಟರ್ ಹಾಗೂ ಬೈಕ್ ಸವಾರರ ಮಧ್ಯ ವಾಹನ ಚಲಾಯಿಸುವ ವಿಷಯವಾಗಿ ರೈಲ್ವೆ ಟ್ರ್ಯಾಕ್ ಮೇಲೆ ವಾಗ್ವಾದ ನಡೆದಿದೆ. ಗೇಟ್ ಮ್ಯಾನ್ ಮಧ್ಯ ಪ್ರವೇಶ ಮಾಡಿ ಸಮಾಧಾನ ಪಡಿಸಿದ್ದಾರೆ.
ನಿತ್ಯ ಹೀಗೆ ಗೇಟ್ ಹಾಕಿದ್ರೇ ಸಾಕು ವಾಹನ, ಚಕ್ಕಡಿ, ಟ್ರ್ಯಾಕ್ಟರ್, ಸಾರಿಗೆ ಬಸ್ ಸೇರಿದಂತೆ ಟ್ರ್ಯಾಫಿಕ್ ಏರ್ಪಟ್ಟು ಜಗಳ, ವಾಗ್ವಾದ ಉಂಟಾಗುತ್ತಲೇ ಇದೆ. ಆದರೂ ರೈಲ್ವೆ ಇಲಾಖೆ ಹಾಗೂ ಜನಪ್ರತಿನಿಧಿಗಳು ಸೂಕ್ತ ನಿರ್ಧಾರ ಕೈಗೊಳ್ಳದೆ ಸುಮ್ಮನೆ ಇರುವುದು ಜನರಿಗೆ ತಾಪತ್ರಯ ತಂದೊಡ್ಡಿದೆ.
Kshetra Samachara
08/06/2022 08:50 pm