ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹಂದಿಗಳ ಕಾಟಕ್ಕೆ ಹೈರಾಣಾದ ಜನ: ಮೂಲ ಸೌಕರ್ಯ ಕೊರತೆಯಿಂದ ರೋಗಗಳಿಗೆ ಆಹ್ವಾನ

ಕುಂದಗೋಳ : ಕಳೆದ ಹಲವಾರು ವರ್ಷಗಳ ಹಿಂದೆ ಸೂರಿಲ್ಲದೆ ಅಕ್ರಮ ಸಕ್ರಮ ಜಾಗ ಖರೀದಿಸಿ ಮನೆ ನಿರ್ಮಿಸಿಕೊಂಡ ಕುಂದಗೋಳ ಪಟ್ಟಣದ ಮೂವತ್ತಕ್ಕೂ ಅಧಿಕ ಕುಟುಂಬಗಳಿಗೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ರೋಗಕ್ಕೆ ಆಹ್ವಾನ ನೀಡುವಂತಾಗಿದೆ.

ಕುಂದಗೋಳ ಪಟ್ಟಣದ ಅಂಬೇಡ್ಕರ್ ಫ್ಲ್ಯಾಟ್ ಹಿಂದಿನ ಕೆಲ ಜಮೀನುಗಳಲ್ಲಿ ಬಡ ಮಧ್ಯಮ ವರ್ಗದವರು ಕಳೆದ ಹತ್ತು ಹದಿನೈದು ವರ್ಷಗಳ ಹಿಂದೆ ಜಾಗ ಖರೀದಿಸಿ ಮನೆ ನಿರ್ಮಿಸಿಕೊಂಡಿದ್ದಾರೆ. ಆದ್ರೆ ಇವರಿಗೆ ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆಯೇ ಇಲ್ಲದೇ ಸುತ್ತಮುತ್ತ ವಾತಾವರಣ ದುರ್ನಾತ ಬೀರುತ್ತಿದೆ. ಜೊತೆಗೆ ಸೊಳ್ಳೆ ಕಾಟ ಬೇರೆ. ಹಾಗೇ ಹಂದಿಗಳ ಸಾಮ್ರಾಜ್ಯವೇ ಇಲ್ಲಿದ್ದು, ಇದೂ ಕೂಡಾ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿ ಪರಿಣಮಿಸಿದೆ.

ಪಟ್ಟಣ ಪಂಚಾಯಿತಿ ಈಗಾಗಲೇ ವಿದ್ಯುತ್ ಹಾಗೂ ನಲ್ಲಿ ಸಂಪರ್ಕ ನೀಡಿದ್ದರೂ ಇನ್ನುಳಿದ ಅಗತ್ಯ ಮೂಲ ಸೌಕರ್ಯ ಒದಗಿಸಬೇಕಾಗಿದೆ. ಮಕ್ಕಳು, ವಯೋವೃದ್ಧರು, ಅಂಗವಿಕಲರನ್ನು ಕಟ್ಟಿಕೊಂಡು ಇಂತಹ ಅವ್ಯವಸ್ಥೆ ವಾತಾವರಣದಲ್ಲಿ ಬದುಕುವ ಕುಟುಂಬಗಳಿಗೆ ಮುಖ್ಯವಾಗಿ ಸ್ವಚ್ಚತೆ, ನೈರ್ಮಲ್ಯದ ಜಾಗೃತಿ ಜೊತೆ ಅಗತ್ಯ ಸೌಲಭ್ಯಗಳನ್ನು ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಒದಗಿಸಲಿ ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ

Edited By : Manjunath H D
Kshetra Samachara

Kshetra Samachara

07/06/2022 04:31 pm

Cinque Terre

30.68 K

Cinque Terre

0

ಸಂಬಂಧಿತ ಸುದ್ದಿ