ಕುಂದಗೋಳ: ಮಾನ್ಯ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳೇ ಹಾಗೂ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದ ಪಿಡಿಓ ಸಾಹೇಬ್ರೆ ನಿಮ್ಮ ಅಧಿಕಾರದ ಬೇಜಾವಾಬ್ದಾರಿ ಇಲ್ಲೊಂದು ಗ್ರಾಮಕ್ಕೆ ನೀರಿಲ್ಲದಂತೆ ಮಾಡಿದೆ.
ಕಡಪಟ್ಟಿ ಗ್ರಾಮದ ಶುದ್ಧ ನೀರಿನ ಘಟಕ ಕೆಟ್ಟ ಪರಿಣಾಮ ಜನ ಕೆರೆಯ ಕಲುಷಿತ ನೀರನ್ನೇ ನಿತ್ಯ ಸೇವಿಸಿ ಆಸ್ಪತ್ರೆ ಪಾಲಾಗುತ್ತಿದ್ದಾರೆ. ಇನ್ನೂ ಕೆರೆ ನೀರಿಗಾಗಿ ತಳ್ಳುವ ಗಾಡಿ ಹಿಡಿದು ಮೆಟ್ಟಿಲು ಏರುವ ಮಹಿಳೆಯರು ವೃದ್ಧರ ಪಾಡು ಹೇಳತಿರದು.
ಕಳೆದ ಹದಿನೈದು ದಿನಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದೆ. ಕೆರೆಯ ಸುತ್ತ ಕಸ ಕಡ್ಡಿ, ಮುಳ್ಳು ಕಂಟಿ ಬೆಳೆದಿದ್ದು, ನಾಯಿಗಳು ಕೆರೆಯಲ್ಲಿ ಈಜಾಟ ಆರಂಭಿಸಿವೆ. ಕೆರೆಯ ಮೆಟ್ಟಿಲು ಕಲ್ಲುಗಳು ಗೋಡೆ ಬಿದ್ದು ಸಾರಾಯಿ ಪಾಕೆಟ್ ಎಲ್ಲೆಂದರಲ್ಲಿವೆ. ಈ ಅವ್ಯವಸ್ಥೆ ತಾಲೂಕು ಪಂಚಾಯಿತಿಗೆ ನಾಚಿಕೆ ತರುತ್ತಿದೆ.ಶಾಲಾ ಮಕ್ಕಳು ಶಾಲೆ ಬಿಟ್ರೇ ಸಾಕು ನೀರನ್ನೆ ತರುತ್ತಿದ್ದು, ಜಾನುವಾರುಗಳಿಗೆ ಕುಡಿಯಲು ಯೋಗ್ಯವಲ್ಲದ ನೀರನ್ನು ಜನ ಕುಡಿಯುತ್ತಿದ್ದಾರೆ.
ಒಟ್ಟಾರೆ ಪಿಡಿಓ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳೇ ನೀವೊಮ್ಮೆ ಈ ಕೆರೆ ನೀರು ಕುಡಿಯಿರಿ, ಇಲ್ಲವೇ ನೀವೆ ಎರೆಡು ಕೊಡ ಹಿಡಿದು ಕೆರೆ ನೀರು ತಂದ್ರೇ ಸಮಸ್ಯೆ ನಿಮಗೆ ಅರ್ಥ ಆಗುತ್ತೆ ಎಂಬುದು ಜನಾಭಿಪ್ರಾಯ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
05/06/2022 12:18 pm