ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಳೆ ಬಂದ್ರೆ ಸಾಕು ಸಮಸ್ಯೆಗಳ ಸರಮಾಲೆ- ಇದು ಅಯೋಧ್ಯಾನಗರದ ಅವ್ಯವಸ್ಥೆ ಕಥೆ.!

ಹುಬ್ಬಳ್ಳಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ ಜೋರಾಗಿದೆ. ಮಳೆಯಿಂದ ಚರಂಡಿ ತುಂಬಿ ಹರಿಯುತ್ತಿದ್ದು, ಜನರು ಪಾಲಿಕೆ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.

ಹೌದು. ಈಗಾಗಲೇ ಸುಮಾರು ಬಾರಿ ಪಾಲಿಕೆಗೆ ಮನವಿ ಮಾಡಿದ್ದರೂ ವಾರ್ಡ್ ನಂಬರ್ 72 ನವ ಅಯೋಧ್ಯಾನಗರದಲ್ಲಿನ ಚರಂಡಿ ಸಮಸ್ಯೆಗೆ ಪಾಲಿಕೆ ಸಿಬ್ಬಂದಿ ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಮಳೆಯಿಂದ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಜನರು ಪರದಾಡುವಂತಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬರುವ ಈ ವಾರ್ಡ್ ನಿಜಕ್ಕೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಈಗ ರೋಗದ ಭೀತಿಯಿಂದ ಜನರು ಜೀವನ ನಡೆಸುವಂತಾಗಿದೆ. ಇನ್ನೂ ಅವ್ಯವಸ್ಥಿತ ಚರಂಡಿಯಿಂದ ಜನರು ದಿನವೂ ನರಕಯಾತನೆ ಅನುಭವಿಸುವಂತಾಗಿದ್ದು,‌ ಮಳೆಗಾಲದಲ್ಲಿ ಜನರ ಬವಣೆ ಹೇಳ ತೀರದಂತಾಗಿದೆ.

Edited By : Nagesh Gaonkar
Kshetra Samachara

Kshetra Samachara

02/06/2022 08:02 pm

Cinque Terre

18.07 K

Cinque Terre

0

ಸಂಬಂಧಿತ ಸುದ್ದಿ