ಅಣ್ಣಿಗೇರಿ: ನಮಸ್ಕಾರ ರೀ.... ವಾಯು ಕರ್ನಾಟಕ ಸಾರಿಗೆ ಅಧಿಕಾರಿಗಳ ನೋಡ್ರಿ. ಇವತ್ತ ನಾವು ನಿಮಗ ಏನ ಹೇಳ ಕತ್ತಿವಿ ಅಂದ್ರ, ಅಣ್ಣಿಗೇರಿ ಊರ್ ಬಗ್ಗೇನರೀ. ಹೌದ್ರಿ ಯಪ್ಪ ಅಣ್ಣಿಗೇರಿ ಅಂದ ಕೂಡ್ಲೆ ಯಾವ ಅಣ್ಣಿಗೇರಿ ಅಂತ ಯೋಚನೆ ಮಾಡಬೇಡ ರೀ ಸಾಹೇಬರ. ಪಂಪ ಹುಟ್ಟಿದ ಊರ ಐತ್ರಿ ಇದ,ಈ ಊರ ಬಸ್ ನಿಲ್ದಾಣದ ಒಳಗ ಎಲ್ಲಿ ನೋಡಿದರ ಅಲ್ಲೇ ಜಾಡ ತುಂಬಿಕೊಂಡ ಬಿಟ್ಟೆತ್ರೀ ಸಾಹೇಬರ. ತಲೆಯೆತ್ತಿ ನೋಡಿದರ ಎಲ್ಲಿ ನೋಡಿದ್ರು ಜೇಡರ ಬಲಿ ಕಾಣ್ತಾವ್ರಿ.
ಸ್ವಚ್ಛ ಭಾರತ ಸ್ವಚ್ಛ ಭಾರತ ಅಂತ ನಮ್ಮ ಪ್ರಧಾನಮಂತ್ರಿ ಮೋದಿಜಿ ಅವರ ಅಭಿಯಾನ ಪ್ರಾರಂಭ ಮಾಡ್ಯಾರ ರೀ. ಗ್ರಾಮ,ಪಟ್ಟಣ,ನಗರ,ದೇಶ ಎಲ್ಲಾ ಸ್ವಚ್ಛ ಇರಲಿ ಅಂತ ಅವರ ಆಸೆ ರೀ. ಆದ್ರ ಸಾಹೇಬ್ರ ಅವರ ಆಸೆ ಇಂತಹ ಕೆಲವೊಂದು ಜಗದಾಗ ಈಡೇರುತ್ತಿಲ್ಲ ನೋಡ್ರಿ.
ಪ್ರಯಾಣಿಕರ ವಿಷಯಕ್ ಬಂದ್ರ ಏನ ಅನ್ನ ಕತಾರ ಅಂದ್ರ ಸಿಕ್ಕ ಸಿಕ್ಕಾಗ ಬಸ್ ಟಿಕೆಟ್ ರೇಟ್ ಜಾಸ್ತಿ ಮಾಡ್ತಾರಾ. ಇನ್ನೂ ಒಂದು ತಿಂಗಳ ಆಗಲ್ಲ ಜಾಸ್ತಿ ಮಾಡಿ ಸ್ವಚ್ಛ ಮಾಡಕ್ ಏನ್ ಇವರಿಗೆ ಅಂತ ಮಾತಾಡಕತ್ತಾರಿ.
ಸಾಹೇಬ್ರ ಬಸ್ ನಿಲ್ದಾಣದ ಒಳಗ ರೋಡ ಬಹಳ ಚಂದ ಐತ್ರಿ, ನೀರಿನ ವ್ಯವಸ್ಥೆನೂ ಐತ್ರಿ, ಕುಂದ್ರಾಕ ವ್ಯವಸ್ಥೆನೂ ಐತ್ರಿ. ಆದ್ರ ಈ ಜಾಡ ಒಂದ ತಗದ ಕೊಡ್ರಿ ಅಂತ ಸಾರ್ವಜನಿಕರ ಪರವಾಗಿ ಪಬ್ಲಿಕ್ ನೆಕ್ಸ್ಟ್ ಕಡೆಯಿಂದ ಒಂದು ಕಳಕಳಿಯ ವಿನಂತಿ ಐತಿ ನೋಡ್ರಿ ಸಾಹೇಬ್ರೆ...ನಮಸ್ಕಾರ ರೀ.
- ನಂದೀಶ ಪಬ್ಲಿಕ್ ನೆಸ್ಟ್ ಅಣ್ಣಿಗೇರಿ
Kshetra Samachara
29/05/2022 06:06 pm