ಅಣ್ಣಿಗೇರಿ: ಪಟ್ಟಣದಲ್ಲಿ ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಡೀಸೆಲ್‌ಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ.
ಪಟ್ಟಣದಲ್ಲಿ ರೈತರು ಡೀಸೆಲ್‌ಗಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಮುಂಗಾರು ಬಿತ್ತನೆ ಇನ್ನೇನು ಪ್ರಾರಂಭವಾಗುತ್ತದೆ ಈ ಕಾರಣಕ್ಕಾಗಿ ರೈತರು ಹೊಲ ಹದ ಮಾಡಬೇಕಾಗಿರುತ್ತದೆ. ಸರಿಯಾದ ವೇಳೆಗೆ ಡೀಸೆಲ್ ಸಿಗದ ಕಾರಣ ತಮ್ಮೆಲ್ಲ ಕೃಷಿ ಚಟುವಟಿಕೆಗಳನ್ನು ಬಿಟ್ಟು ಡೀಸೆಲ್‌ಗಾಗಿ ಪಟ್ಟಣದ ಬಂಕ್‌ಗಳಲ್ಲಿ ಕಾಯುತ್ತಿರುವ ದೃಶ್ಯಗಳು ಕಂಡುಬಂದವು. ಆದರೆ ಇದಕ್ಕೆ ಮೂಲ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
Kshetra Samachara
28/05/2022 07:52 pm