ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವರದಿಗೆ ಎಚ್ಚೆತ್ತು ಗುಂಡಿ ಮುಚ್ಚಿ ಜನರಿಗೆ ಅನುಕೂಲ ಮಾಡಿದ ಸ್ಮಾರ್ಟ್ ಸಿಟಿ ಅಧಿಕಾರಿಗಳು

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್- ಈರಣ್ಣ ವಾಲಿಕಾರ

ಹುಬ್ಬಳ್ಳಿ: ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಎಚ್ಚೆತ್ತುಕೊಂಡ ಸ್ಮಾರ್ಟ್ ಸಿಟಿ ಅಧಿಕಾರಿಗಳು ಜನಸಾಮಾನ್ಯರಿಗೆ ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಸಾವಿನ ಗುಂಡಿಗೆ ಇಂದು ಪಬ್ಲಿಕ್ ನೆಕ್ಸ್ಟ್ ನಿಂದ ಮುಕ್ತಿ ಸಿಕ್ಕಿದೆ.

ಹೌದು. ಜನಸಂದಣಿಯ ಸ್ಥಳವಾದ ಜನತಾ ಬಜಾರದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ದೊಡ್ಡದೊಂದು ಗುಂಡಿಯನ್ನು ತೋಡಿದ್ದರು. ಆದರೆ ಈ ಗುಂಡಿ ಜನರ ಜೀವಕ್ಕೆ ಕುತ್ತಾಗಿತ್ತು. ಇಲ್ಲಿನ ಸ್ಥಳೀಯರು ಸಂಬಂಧಿಸಿದ ಅಧಿಕಾರಿಗಳಿಗರ ಎಷ್ಟೋ ಬಾರಿ ಮನವಿ ನೀಡಿದರೂ ಕ್ಯಾರೆ ಎಂದಿದ್ದಲ್ಲವಂತೆ. ಈ ಕುರಿತು ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ವರದಿಗೆ ಎಚ್ಚೆತ್ತುಕೊಂಡ ಸ್ಮಾರ್ಟ್ ಸಿಟಿ ಅಧಿಕಾರಿಗಳು ಆ ಗುಂಡಿಯನ್ನು ಮುಚ್ಚಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳು ಪಬ್ಲಿಕ್ ನೆಕ್ಸ್ಟ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By : Nagesh Gaonkar
Kshetra Samachara

Kshetra Samachara

28/05/2022 06:31 pm

Cinque Terre

84.06 K

Cinque Terre

2

ಸಂಬಂಧಿತ ಸುದ್ದಿ