ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅನಧಿಕೃತ ಕಾಂಪೌಂಡ್ ತೆರವು: ಶಾಸಕ ಅಬ್ಬಯ್ಯ ನೇತೃತ್ವದಲ್ಲಿ ಮಹತ್ವದ ಕಾರ್ಯಾಚರಣೆ

ಹುಬ್ಬಳ್ಳಿ: ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ವಾಣಿಜ್ಯನಗರಿ ಹುಬ್ಬಳ್ಳಿ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ. ಎಲ್ಲೆಂದರಲ್ಲಿ ನೀರು ನಿಂತು ಜನಜೀವನಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರು ಜೆಸಿಬಿ ಕಾರ್ಯಾಚರಣೆ ನಡೆಸುವ ಮೂಲಕ ಅನಧಿಕೃತ ಕಾಂಪೌಂಡ್ ತೆರವು ಮಾಡುವ ಮೂಲಕ ನೀರು ಹರಿದು ಹೋಗಲು ಅವಕಾಶ ಕಲ್ಪಿಸಿದ್ದಾರೆ.

ಹೌದು...ಹುಬ್ಬಳ್ಳಿ ಪಿಬಿ ರಸ್ತೆಗೆ ಹೊಂದಿಕೊಂಡಿರುವ ವಾಳ್ವೇಕರ ಹಕ್ಕಲದಲ್ಲಿ ಸುಮಾರು ದಿನಗಳಿಂದ ಸಮಸ್ಯೆ ಎದಾರಾಗಿತ್ತು. ಅಲ್ಲದೇ ಅನಧಿಕೃತ ಕಾಂಪೌಂಡ್ ನಿರ್ಮಾಣದಿಂದ ಸಾಕಷ್ಟು ಸಮಸ್ಯೆಯಾಗಿದ್ದು, ಈ ಕಾಂಪೌಂಡ್‌ನಿಂದ ನೀರು ಹರಿದು ಹೋಗದೇ ವಾಳ್ವೇಕರ ಕಾಲೋನಿಯಲ್ಲಿ ನೀರು ನಿಂತು ಜನರು ಪರದಾಡುವಂತಾಗಿತ್ತು. ಈ ಕುರಿತು ಸಾರ್ವಜನಿಕರು ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದು, ಶಾಸಕ ಅಬ್ಬಯ್ಯ ತಕ್ಷಣವೇ ಆಗಮಿಸಿ ಜೆಸಿಬಿ ಮೂಲಕ ಕಾರ್ಯಾಚರಣೆ ಕೈಗೊಂಡು ಅನಧಿಕೃತ ಕಾಂಪೌಂಡ್ ಗೋಡೆಯನ್ನು ಒಡೆದು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ್ದಾರೆ.

ಈಗಾಗಲೇ ಅವಳಿನಗರದಲ್ಲಿ ಸಾಕಷ್ಟು ಕಡೆಯಲ್ಲಿ ಅವಘಡಗಳು ಸಂಭವಿಸಿದ್ದು, ಸ್ಥಳೀಯ ನಾಯಕರು, ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾಡಳಿತ ಮತ್ತಷ್ಟು ಕ್ರಮಗಳನ್ನು ಜರುಗಿಸುವ ಮೂಲಕ ಜನರ ಹಿತವನ್ನು ಕಾಪಾಡಬೇಕಿದೆ.

Edited By :
Kshetra Samachara

Kshetra Samachara

20/05/2022 04:17 pm

Cinque Terre

48.95 K

Cinque Terre

4

ಸಂಬಂಧಿತ ಸುದ್ದಿ