ನವಲಗುಂದ: ದಿನನಿತ್ಯ ಸಾವಿರಾರು ಜನರು ಸಂಚರಿಸುವ ಪ್ರಮುಖ ರಸ್ತೆ, ನೂರಾರು ಜನ ಕುಳಿತು ಊಟ ಮಾಡುವ ಸ್ಥಳ ಈಗ ಸಾಂಕ್ರಮಿಕ ರೋಗದ ಭಯವನ್ನು ಉಂಟುಮಾಡಿದೆ. ಇನ್ನೊಂದೆಡೆ ಈ ಕಿರು ಸೇತುವೆಯಿಂದ ಅಪಘಾತದ ಆತಂಕವೂ ಹೆಚ್ಚಿದೆ. ಅಷ್ಟಕ್ಕೂ ಈ ದೃಶ್ಯಗಳು ಕಂಡು ಬಂದಿದ್ದು ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದಲ್ಲಿ...
ಎಸ್... ಈ ರಸ್ತೆ ಯಮನೂರ ಗ್ರಾಮದಿಂದ ಪಡೆಸೂರ, ಶಾನವಾಡ ಹಾಗೂ ಹಾಲಕುಸುಗಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತೆ. ಈ ರಸ್ತೆ ಹಾಗೂ ಕಿರು ಸೇತುವೆಯ ಬಗ್ಗೆ ಈಗಾಗಲೇ ಅಧಿಕಾರಿಗಳನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಎಚ್ಚರಿಸುವ ಕೆಲಸ ಮಾಡಿದೆ. ಇನ್ನೊಂದೆಡೆ ಇದೇ ಸೇತುವೆ ಕಳೆದ ಬಾರಿಗಿಂತ ಈಗ ಸಂಪೂರ್ಣ ಕುಸಿದಿದೆ. ನೀರು ಮುಂದೆ ಹರಿದು ಹೋಗಲು ಸ್ಥಳವಿಲ್ಲದೇ ಕೊಳಚೆ ಅಲ್ಲಿಯೇ ಸಿಲುಕಿದೆ.
ಇತ್ತ ಯಮನೂರ ಚಾಂಗದೇವನ ದರ್ಶನಕ್ಕೆ ಬಂದ ಭಕ್ತರು ಇದೇ ಸ್ಥಳದಲ್ಲಿ ಕೂತು ಅಡುಗೆ ಮಾಡಿ, ಊಟ ಮಾಡುತ್ತಾರೆ. ಇಂತಹ ಕೊಳಚೆಯ ವಾತಾವರಣ ಇಲ್ಲಿಗೆ ಬಂದ ಭಕ್ತರಿಗೆ ಸಾಂಕ್ರಾಮಿಕ ರೋಗದ ಆತಂಕವನ್ನು ಹೆಚ್ಚಿಸಿದೆ. ಈ ಬಗ್ಗೆ ಅಧಿಕಾರಿಗಳು ಯಾವಾಗ ಎಚ್ಚೆತ್ತುಕೊಳ್ಳುತ್ತಾರೋ ಕಾದು ನೋಡ್ಬೇಕಿದೆ.
Kshetra Samachara
18/05/2022 04:51 pm