ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿದ್ಯುತ್ ಕಂಬಕ್ಕೆ ಒಲಿದು ಬಂತು ತಾತ್ಕಾಲಿಕ ದುರಸ್ತಿ ಭಾಗ್ಯ

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಇದು ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್. ಜೀವಕ್ಕೆ ಕುತ್ತಾಗಿದ್ದ ವಿದ್ಯುತ್ ಕಂಬಕ್ಕೆ ಸದ್ಯ ತಾತ್ಕಾಲಿಕ ದುರಸ್ಥಿ. ಹೌದು. ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಎಚ್ಚತ್ತುಕೊಂಡ ಹೆಸ್ಕಾಂ ಅಧಿಕಾರಿಗಳು, ವಿದ್ಯುತ್ ಕಂಬಕ್ಕೆ ಜೋತು ಬಿದ್ದ ವೈಯರ್‌ಗಳನ್ನು ಸರಿಯಾಗಿ ಜೋಡಿಸಿ ಅವುಗಳ ಮೇಲೆ ಪ್ಲಾಸ್ಟಿಕ್ ಹಾಳೆಯನ್ನು ಕಟ್ಟುವುದರ ಮೂಲಕ ಭಯವನ್ನು ದೂರ ಮಾಡಿದ್ದಾರೆ.

ಹೌದು.ನಗರದ ದೇಶಪಾಂಡೆ ನಗರದ ಬ್ಯಾಹಟ್ಟಿ ಪ್ಲಾಟ್‌ದಲ್ಲಿ ವಿದ್ಯುತ್ ಕಂಬಕ್ಕೆ ಕರೆಂಟ್ ವೈಯರ್‌ಗಳು ಜೋತು ಬಿದ್ದು ಜನರ ಜೀವಕ್ಕೆ ಕುತ್ತಾಗಿತ್ತು. ಇದಕ್ಕೆ "ಹೆಸ್ಕಾಂ ಅಧಿಕಾರಿಗಳ ಎಡವಟ್ಟು; ಜನರ ಜೀವಕ್ಕೆ ಕುತ್ತು ಈ ವಿದ್ಯುತ್ ಕಂಬ" ಎಂಬ ಶೀರ್ಷಿಕೆ ಅಡಿಯಲ್ಲಿ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ವರದಿಯನ್ನು ನೋಡಿದ ಹೆಸ್ಕಾಂ ಅಧಿಕಾರಿಗಳು ಈಗ ತಾತ್ಕಾಲಿಕ ದುರಸ್ಥಿ ಮಾಡಿದ್ದಾಎರೆ. ಇದರಿಂದ ಅಲ್ಲಿನ ನಿವಾಸಿಗಳು ಪಬ್ಲಿಕ್ ನೆಕ್ಸ್ಟ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ವಿದ್ಯುತ್ ಕಂಬದಲ್ಲಿ ಕರೆಂಟ್ ವೈಯರ್‌ಗಳು ಕೆಳಗೆ ನೇತಾಡುತ್ತಿದ್ದವು. ಈ ಸಮಸ್ಯೆ ಬಗ್ಗೆ ಅಲ್ಲಿನ ನಿವಾಸಿಗಳು ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ಆದರೂ ಯಾರು ಕೂಡ ಕ್ಯಾರೆ ಎಂದಿರಲಿಲ್ಲ. ಆದರೆ, ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ ಕೂಡಲೆ ಹೆಸ್ಕಾಂ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

10/05/2022 10:34 pm

Cinque Terre

25.64 K

Cinque Terre

0

ಸಂಬಂಧಿತ ಸುದ್ದಿ