ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರಕ್ಕೆ ಕಾಳಿ ನದಿ ನೀರು- ಕೆಲವೇ ದಿನಗಳಲ್ಲಿ ಮನೆಗಳಿಗೆ ಲಭ್ಯ

ಅಳ್ನಾವರ: ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ದಾಂಡೇಲಿ ಇಂದ ಹಳಿಯಾಳ ಮಾರ್ಗವಾಗಿ ಅಳ್ನಾವರದವರೆಗೆ ಕಾಳಿ ನದಿ ಯೋಜನೆ ಹಲವು ಪ್ರಯತ್ನಗಳ ಪ್ರತಿಫಲವಾಗಿ ಇಂದು ಯಶಸ್ವಿಯಾಗಿದ್ದು ಇತಿಹಾಸ. ಇದೀಗ ಪಟ್ಟಣದಲ್ಲಿ ಕುಡಿಯುವ ನೀರಿನ ಕಾರ್ಯ ಭರದಿಂದ ಸಾಗಿದೆ.

ಕುಡಿಯುವ ನೀರಿಗಾಗಿ ಪರದಾಡುವ ಪಟ್ಟಣದ ಜನತೆಗೆ ಗಂಗಾ ಮಾತೇ ಹಲವು ರಾಜಕಾರಣಿ, ಜನತೆ ಹಾಗೂ ಕಾರ್ಯಕರ್ತರ ಶ್ರಮದ ಫಲವಾಗಿ ಇಂದು ಪಟ್ಟಣಕ್ಕೆ ಕಾಳಿ ನದಿ ನೀರು ಬಂದೊದಗಿದೆ. ಪಟ್ಟಣದಲ್ಲಿ ನೀರಿನ ಪೈಪ್ ಅಳವಡಿಕೆ ಕಾರ್ಯ ಅತ್ಯಂತ ವೇಗವಾಗಿ ನಡೆಯುತ್ತಿದೆ.

ಬೇಸಿಗೆ ಕಾಲ ಬಂತೆಂದರೆ ನೀರಿಗಾಗಿ ಪರದಾಡುವ ಜನರ ಕಷ್ಟಕ್ಕೆ ಕಾಳಿ ನದಿ ವರವಾಗಿ ಪರಿಣಮಿಸಿದೆ. ಪೈಪ್ ಅಳವಡಿಕೆ, ನಲ್ಲಿ ಜೋಡಣೆಯ ಕಾರ್ಯಗಳು ಯಶಸ್ವಿಯಾಗಿ ಮುಂದುವರೆದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಪ್ರತಿ ಮನೆ ಮನೆಗೂ ಕಾಳಿ ಬರಲಿದ್ದಾಳೆ. ಪಟ್ಟಣದ ಜನತೆಗೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಸಿಕ್ಕಿದ್ದು ಸಹಜವಾಗಿಯೇ ಖುಷಿ ತಂದಿದೆ.

ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ

Edited By : Nagesh Gaonkar
Kshetra Samachara

Kshetra Samachara

10/05/2022 01:26 pm

Cinque Terre

39.08 K

Cinque Terre

1

ಸಂಬಂಧಿತ ಸುದ್ದಿ