ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಳೆಗೆ ಧರೆಗೆ ಉರುಳಿದ 60 ವಿದ್ಯುತ್ ಕಂಬಗಳು: ಹೆಸ್ಕಾಂಗೆ 25 ಲಕ್ಷ ಹಾನಿ

ಹುಬ್ಬಳ್ಳಿ: ಕಳೆದ ಎರಡು ದಿನಗಳಿಂದ ಹುಬ್ಬಳ್ಳಿಯಲ್ಲಿ ಸುರಿದ ಬಿರುಗಾಳಿ ಸಹಿತ ಮಳೆ ಹಿನ್ನೆಲೆಯಲ್ಲಿ 60 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಹೆಸ್ಕಾಂ ಇಲಾಖೆಗೆ ಸುಮಾರು 25 ಲಕ್ಷ ರೂಪಾಯಿ ಹಾನಿಯಾಗಿದೆ.

ದೇಶಪಾಂಡೆನಗರ, ದೇಸಾಯಿ ಸರ್ಕಲ್, ವಿದ್ಯಾನಗರ, ಹಳೆ ಹುಬ್ಬಳ್ಳಿ ಸೇರಿದಂತೆ ಹುಬ್ಬಳ್ಳಿಯ ಹಲವು ಬಡಾವಣೆಗಳಲ್ಲಿ ಮರಗಳ ಜೊತೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ಸಾರ್ವಜನಿಕರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.

ವಿಶ್ವೇಶ್ವರ ನಗರ, ವಿಜಯನಗರ, ದೇಶಪಾಂಡೆ ನಗರ, ಹಳೆ ಹುಬ್ಬಳ್ಳಿ, ಅಶೋಕ ನಗರ, ಶಿರೂರ ಪಾರ್ಕ್, ಉಣಕಲ್ ಮತ್ತಿತರ ಕಡೆಗಳಲ್ಲಿ ಬಾರಿ ಗಾತ್ರದ ಮರಗಳು ಬಿದ್ದಿರುವ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ನಗರದ ವಿವಿಧ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕೆಲವೆಡೆ ತೆರವು ಕಾರ್ಯಾಚರಣೆ ಪೂರ್ಣಗೊಳ್ಳದೇ ಇರುವುದರಿಂದ ಹಲವು ಬಡಾವಣೆಗಳಲ್ಲಿ ಎರಡು ದಿನಗಳಿಂದಲೂ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳನ್ನು ಸರಿಪಡಿಸಿ, ಲೈನ್ ಎಳೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

06/05/2022 06:55 pm

Cinque Terre

72.99 K

Cinque Terre

12

ಸಂಬಂಧಿತ ಸುದ್ದಿ