ನವಲಗುಂದ : "ನೀಲಮ್ಮನೆ ಕೆರೆ ಪಾವಿತ್ರ್ಯತೆಗೆ ಸವಾಲಾಗಿದೆ ಬಸ್ತಿ ಪ್ಲಾಟ್ ಡ್ರೈನೆಜ್ ವಾಟರ್ ಪೈಪ್" ಎಂಬ ಶೀರ್ಷಿಕೆ ಅಡಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸುದ್ದಿಯನ್ನು ಬಿತ್ತರಿಸಿತ್ತು. ಸುದ್ದಿಗೆ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ ಅವರು ಪೈಪ್‌ನ ದುರಸ್ತಿ ಕಾರ್ಯ ಮಾಡಿಸಿದ್ದಾರೆ.
ಹೌದು. ನವಲಗುಂದ ನಗರದ ಬಸ್ತಿ ಪ್ಲಾಟ್ ಪ್ರದೇಶದ ಮಲಿನಯುಕ್ತ ನೀರು ಸೋರಿಕೆಯಾಗಿ ಕೋಡಿ ಸೇರುತ್ತಿತ್ತು. ಹೀಗಾಗಿ ಕೋಡಿಗೆ ಸೇರುತ್ತಿರುವ ಮಲಿನ ನೀರಿನಿಂದ ಕೆರೆಯ ಪಾವಿತ್ರ್ಯತೆಗೆ ಸವಾಲು ಎದುರಾಗಿತ್ತು. ಸಮರ್ಪಕ ನೀರು ಹೊರ ಹೋಗಲು ವ್ಯವಸ್ಥೆ ಇಲ್ಲದೇ, ಚರಂಡಿಯಲ್ಲಿನ ತ್ಯಾಜ್ಯ ತೆರವುಗೊಳಿಸದ ಹಿನ್ನೆಲೆ ಇಷ್ಟೆಲ್ಲಾ ಸಮಸ್ಯೆ ಬಂದಿದೆ ಎನ್ನಲಾಗುತ್ತಿತ್ತು. ಈ ಬಗ್ಗೆ ಏಪ್ರಿಲ್ 18ರಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಸುದ್ದಿಯನ್ನು ಬಿತ್ತರಿಸಿತ್ತು.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ನವಲಗುಂದ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ ಅವರು ಕೆರೆಯ ಪಾವಿತ್ರ್ಯತೆಗೆ ಸವಾಲಾಗಿದ್ದ ಡ್ರೈನೇಜ್ ನೀರು ತಡೆಯುವಲ್ಲಿ ಮುಂದಾಗಿದ್ದು, ಕಾಂಕ್ರೀಟ್ ಮಾಡುವ ಮೂಲಕ ಸಮಸ್ಯೆಗೆ ಅಂತ್ಯ ಹಾಡಿದ್ದಾರೆ. ಮುಖ್ಯಾಧಿಕಾರಿ ವೀರಪ್ಪ ಹಸಬಿ ಅವರ ಕಾರ್ಯಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.
Kshetra Samachara
04/05/2022 04:10 pm