ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರಸ್ತೆ ಪರಿಸ್ಥಿತಿ ನೋಡಿ..ಕರ್ತವ್ಯ ಪ್ರಜ್ಞೆ ಮೆರೆಯಿರಿ !

ಕುಂದಗೋಳ : ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ನಿಮಗೊಂದು ದೀರ್ಘ ದಂಡ ನಮಸ್ಕಾರಗಳು ನೋಡ್ರಿ, ನೀವೂ ನಿತ್ಯ ಈ ಹಾಳಾದ ರಸ್ತೆಯಲ್ಲಿ ಪ್ರಯಾಣ ಬೆಳೆಸುವ ವಾಹನ ಸವಾರರ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ಕಾಲ ಯಾವಾಗ ? ಹೇಳಿ.

ಇಂತಹದೊಂದು ಪ್ರಶ್ನೇಯನ್ನು ನಾವು ಕೇಳ್ತಾಯಿಲ್ಲಾ ಬದಲಿಗೆ ಸಾರ್ವಜನಿಕರೇ ಈ ಪ್ರಶ್ನೆಯನ್ನಾ ನಿಮ್ಮನ್ನಾ ಕೇಳುತ್ತಿದ್ದಾರೆ. ಹೌದು ಕುಂದಗೋಳ ತಾಲೂಕಿನ ಕಳಸ, ಸಂಕ್ಲಿಪುರ, ಸುಲ್ತಾನಪುರ ರಸ್ತೆಯಲ್ಲಿ ನಿತ್ಯ ಓಡಾಡುವ ಜನರ ಪರಿಸ್ಥಿತಿ ಹೇಳತಿರದು.

ದಿನಬೆಳಗಾದರೆ ಚಕ್ಕಡಿ, ಟ್ರ್ಯಾಕ್ಟರ್, ಸಾರಿಗೆ, ಬೈಕ್ ಕೃಷಿ ಚಟುವಟಿಕೆಗೆ ರೈತರ ಓಡಾಟವು ಸಹ ಕಷ್ಟವಾಗಿದೆ. ಈ ರಸ್ತೆ ಪರಿಸ್ಥಿತಿಯನ್ನ ಸ್ಥಳೀಯರು ಅವರದೇ ಮಾತಲ್ಲಿ ವಿವರಿಸಿದ್ದಾರೆ ಕೇಳಿ.

ನಿತ್ಯ ಸಂಚಾರ ನಡೆಸುವ ವಾಹನ ಸವಾರರಿಗೆ ಅಪಘಾತದ ಭೀತಿ ಎದುರಾಗಿ ಮಳೆಯಾದಾಗ ಈ ರಸ್ತೆಯಲ್ಲಿ ಅಪಘಾತ ಸಹ ಸಂಭವಿಸಿವೆ. ಮಾನ್ಯ ಲೋಕೋಪಯೋಗಿ ಅಧಿಕಾರಿಗಳೇ ಈಗಾಲಾದ್ರೂ ನಿಮ್ಮ ಕರ್ತವ್ಯ ಪ್ರಜ್ಞೆ ಮೆರೆಯಿರಿ.

-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

03/05/2022 01:50 pm

Cinque Terre

15.79 K

Cinque Terre

2

ಸಂಬಂಧಿತ ಸುದ್ದಿ