ಹುಬ್ಬಳ್ಳಿ: ನಮಸ್ಕಾರ್ ರೀ ಪಾ..... ನಮ್ ಹುಬ್ಬಾಳ್ಯಾಗಿನ ರಸ್ತೆ ಅಷ್ಟೇ ಹದಗೆಟ್ಟು ಹೈದರಾಬಾದ್ ಆಗಿದ್ದವಾ ಅಂತ ಅಷ್ಟ ಗೊತ್ತಿತ್ ನೋಡ್ರಿ.... ಈಗ ನ್ಯಾಶನಲ್ ಹೈವೆದಲ್ಲಿ ರಸ್ತೇ ನೋಡಿದ್ರ ವಾವ್ ವಾರೇ ವಾ ಅನ್ಬೇಕ್ ನೋಡ್ರಿ... ಯಾಕಂದ್ರ ನಮ್ ಅಧಿಕಾರಿಗಳು ಅಷ್ಟ ಶಾನೆ ಅದಾರ ನೋಡ್ರಿ.... ಅಷ್ಟಕ್ಕೂ ನಾವ್ ಎಲ್ಲಿ ರಸ್ತೆ ಅಂತ ಹೇಳ್ತಾ ಅದೆವಿ ಅನ್ಕೊಂಡಿರಾ.... ಮುಂದ ನೋಡ್ರಿ.....
ಇಲ್ಲಿ ನೋಡ್ರಿ.... ನಮ್ ಶಾನೆ ಅಧಿಕಾರಿಗಳು ಮಾಡಿದ್ದ ಘನಂದಾರ ಕೆಲ್ಸಕ್ ಪ್ರಯಾಣಿಕರ ಜೀವಕ್ಕ ತುತ್ತಾಗಿದೆ... ರೋಡ್ ಅಂದ ಮೇಲ್ ತಗ್ಗು ಗುಂಡಿ ಇರೋದ್ ನಮ್ಮ ಕಡೆ ಕಾಮನ್ ಬಿಡ್ರಿ.... ಹುಬ್ಬಳ್ಳಿಯಿಂದ ಕುಸಗಲ್ ಗ ಹೋಗವ ಮುಂಚೆ ಒಂದು ಬ್ರಿಡ್ಜ್ ಇದೆ ರಿ ಪಾ.... ಬ್ರಿಡ್ಜ್ ದಾಟಿದ ಮೇಲೆ ಬಂತ ನೋಡ್ರಿ ಪಾ ಯಮ ಕಿಂಕರ್..... ನೋಡ್ರಿ ನೋಡ್ರಿ ಈ ರೋಡ್ ನೋಡ್ರಿ... ಇದ ರೋಡ್ ಮೇಲೆ ಅಧಿಕಾರಿಗಳನ್ ಕುಂದರಸ್ಕೊಂಡ ಒಂದ ರೌಂಡ್ ಹೋದ್ರ ಹೆಂಗ್ ಆಗತೈತಿ.... ನಡು ರಸ್ತೆದಾಗ ಡಾಂಬರ್ ಕಿತೈತಿ... ಚಂದಂಗ್ ಪ್ಯಾಚಪ್ ಮಾಡುದ ಬಿಟ್ಟ ದೊಡ್ಡ ದೊಡ್ಡ ಕಲ್ಲು, ಮಣ್ಣು, ಹಾಕಿದ್ದಾರಾ. ಯಾರಾದ್ರು ರಾತ್ರಿವೇಳೆ ಇಲ್ಲಿ ಬೈಕ್ ಅಥವಾ ಕಾರ್ ಇದರ ಮೇಲ ಬಂದರ್ ಸೀದಾ ಯಮನಕಡೆನ ಪ್ರಯಾಣ ನೋಡ್ರಿ..... ಜನರ ಜೀವನದ ಜೊತೆ ಆಟಾ ಆಡ್ತಾ ಇದಾರ ಇವರು.... ಇದಕ್ಕೆ ಜನರೇ ಸರ್ಕಾರದ ಮೇಲೆ ಸಿಟ್ಟ ಆಗಿದ್ದಾರೆ....
ಅಧಿಕಾರಿಗಳು ಇನ್ಮುಂದಾದರೂ ಜನರ ಜೀವನದ ಜೊತೆ ಆಟಾ ಆಡುದ ಬಿಟ್ಟ ಸರಿಯಾದ ಕೆಲಸ ಮಾಡಿ..... ಇಷ್ಟಕ್ಕೂ ನಾವು ಏನು ಹೇಳುದಿಲ್ಲಾ.... ಪಬ್ಲಿಕ್ ನೆಕ್ಸ್ಟ್ ದಲ್ಲಿ ಕಮೆಂಟ್ ಮಾಡ್ರಿ.....
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
29/04/2022 03:38 pm