ನವಲಗುಂದ : ಹಳೆ ತಾಲ್ಲೂಕು ಕಚೇರಿ ಅಂದಕ್ಷಣ ಇಲ್ಲಿ ಯಾವ ಇಲಾಖೆ ಸಹ ಇಲ್ಲ ಅನ್ಕೋಬೇಡಿ, ಇಲ್ಲಿ ಈಗಲೂ ಸಹ ತಾಲೂಕಾ ಕಚೇರಿಯ ಇಲಾಖೆಗಳಿವೆ. ಅರೇ ಇಲಾಖೆ ಇವೆ ಅಂತೀರಿ. ಆದ್ರೆ ಇದೇನೋ ಗುಜರಿ ಅಡ್ಡೆ ತರಾ ಕಾಣುತ್ತಲ್ಲಾ ಅಂತೀರಾ, ಈ ಬಗ್ಗೆ ಮಾಹಿತಿ ನಾವು ನೀಡ್ತೀವಿ...
ಇಲ್ಲಿ ಕೊಂಚ ಅಲ್ಲ, ತುಂಬಾನೆ ಸ್ವಚ್ಛತೆಯ ಕೊರತೆಯಿದೆ. ಕಚೇರಿಯ ಹಿಂಭಾಗ ಮದ್ಯಪಾನದ ಬಾಟಲ್‌ಗಳು ಬಿದ್ದಿವೆ. ಆವರಣದಲ್ಲಿ ಗುಟ್ಕಾ ಪಾಕೆಟ್‌ಗಳು ಸಿಗುತ್ತವೆ. ಇದೆಲ್ಲ ಒಂದು ಕಡೆ ಬಿಡಿ. ಆವರಣದ ಬಗ್ಗೆ ಹೇಳೋದಾದರೆ ಸಂಪೂರ್ಣ ಆವರಣ ವಾಹನಗಳಿಂದ ಕೂಡಿದೆ. ಅದು ಅಪಘಾತಕ್ಕೊಳಗಾದ ವಾಹನಗಳು ಹಾಗೂ ಸೀಜ್ ಮಾಡಲಾದ ವಾಹನಗಳು ಇಲ್ಲಿ ಕಂಡು ಬರುತ್ತವೆ. ಯಾಕಂದರೆ ಪಕ್ಕದಲೇ ನವಲಗುಂದ ಪೊಲೀಸ್ ಠಾಣೆ ಇರುವ ಕಾರಣ ವಾಹನಗಳನ್ನು ಇಲ್ಲಿ ನಿಲ್ಲಿಸಲಾಗುತ್ತಿದೆ.
ಇದರಿಂದಾಗಿ ಆವರಣ ಕೊಂಚ ಗುಜರಿ ಅಡ್ಡೆಯಂತೆ ಕಂಡು ಬರುತ್ತಿದೆ. ಸಾರ್ವಜನಿಕರಿಗೆ ಅನಾನುಕೂಲ ಸಹ ಆಗುತ್ತಿದೆ. ಆದರೆ ಈಗ ಈ ಬಗ್ಗೆ ತಹಶೀಲ್ದಾರ್ ಅನಿಲ ಬಡಿಗೇರ ಹಾಗೂ ಸಿಪಿಐ ಚಂದ್ರಶೇಖರ ಮಠಪತಿ ಅವರು ಸಾರ್ವಜನಿಕರ ಅನುಕೂಲ ಹಾಗೂ ಆವರಣದ ಸ್ವಚ್ಛತೆಗೆ ಆವರಣದಲ್ಲಿನ ವಾಹನಗಳನ್ನು ಸ್ಥಳಾಂತರಿಸಲು ಮುಂದಾಗಿದ್ದಾರೆ. ಆವರಣದ ಸ್ವಚ್ಛತೆ ಸಹ ಮಾಡಲಾಗುವುದು ಎಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಗೆ ತಹಶೀಲ್ದಾರ್ ಅನಿಲ ಬಡಿಗೇರ್ ಸಹ ತಿಳಿಸಿದ್ದಾರೆ. ಆದಷ್ಟು ಬೇಗ ಈ ಕೆಲಸ ಆಗಲಿ. ಹಳೆ ತಾಲ್ಲೂಕು ಕಚೇರಿ ಸ್ವಚ್ಛಗೊಳ್ಳಲಿ ಎಂಬುದು ಸಾರ್ವಜನಿಕರ ಹಾಗೂ ನಮ್ಮ ಆಶಯ ಸಹ ಆಗಿದೆ.
Kshetra Samachara
21/04/2022 09:39 pm