ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅವ್ರು ಕಸ ಚೆಲ್ಲಬಾರದು ಅಂತಾ ರಂಗೋಲಿ ಹಾಕಿದ್ರು..ಇವ್ರು ಅದರ ಪಕ್ಕವೇ ಕಸದ ಗುಡ್ಡೆ ಹಾಕಿದ್ರು !

ಧಾರವಾಡ: ಹುಬ್ಬಳ್ಳಿ, ಧಾರವಾಡ ಸ್ಮಾರ್ಟ್ ಸಿಟಿಯಾಗಿರುವುದರಿಂದ ನಗರಗಳಲ್ಲಿ ಅಲ್ಲಲ್ಲಿ ಕಸ ಚೆಲ್ಲೋದಕ್ಕೆ ಕಡಿವಾಣ ಹಾಕಲು ಪಾಲಿಕೆ ಸಿಬ್ಬಂದಿ ವಿನೂತನ ಪ್ರಯತ್ನವೊಂದನ್ನು ಮಾಡಿದ್ದಾರೆ. ಎಲ್ಲೆಲ್ಲಿ ಕಸ ಚೆಲ್ಲುತ್ತಾರೋ ಆ ಜಾಗಗಳನ್ನು ಸ್ವಚ್ಛಗೊಳಿಸಿ ಅಲ್ಲಿ ಕಟ್ಟಿಗೆಗಳನ್ನು ಕಟ್ಟಿ ರಂಗೋಲಿ ಹಾಕುತ್ತಿದ್ದಾರೆ. ಇದರ ಅರ್ಥ ಇಲ್ಲಿ ಕಸ ಚೆಲ್ಲದೇ ಕಸವನ್ನು ಕಂಟೇನರ್‌ಗಳಲ್ಲಿ ಅಥವಾ ಕಸದ ವಾಹನದಲ್ಲಿ ಹಾಕಿ ಎಂಬುದಾಗಿದೆ.

ಆದರೆ, ಧಾರವಾಡದ ಕೆಲವೊಂದಿಷ್ಟು ಕಡೆಗಳಲ್ಲಿ ಎಲ್ಲಿ ಕಟ್ಟಿಗೆಗಳನ್ನು ಕಟ್ಟಿ, ರಂಗೋಲಿ ಬಿಡಿಸಿ ಕಸದ ಪಾಯಿಂಟ್‌ಗಳನ್ನು ಸ್ವಚ್ಛಗೊಳಿಸಿದ್ದಾರೋ ಅದರ ಪಕ್ಕವೇ ಸಾರ್ವಜನಿಕರು ಮತ್ತೊಂದು ಕಸದ ಪಾಯಿಂಟ್‌ಗಳನ್ನು ಹುಟ್ಟು ಹಾಕಿದ್ದಾರೆ.

ಇದೊಂದು ದೃಶ್ಯ ಎಲ್ಲವನ್ನೂ ಹೇಳುತ್ತದೆ. ಕಸ ಚೆಲ್ಲಬೇಡಿ ಎಂದು ವಿನೂತನ ಪ್ರಯೋಗಕ್ಕೆ ಮುಂದಾದ ಪಾಲಿಕೆ ಸಿಬ್ಬಂದಿಗೆ ನಾವು ಮತ್ತೊಂದು ಕಸದ ಪಾಯಿಂಟ್ ಹುಟ್ಟಿ ಹಾಕುತ್ತೇವೆ ಎಂಬುದನ್ನು ಸಾರ್ವಜನಿಕರು ತೋರಿಸಿಕೊಟ್ಟಿದ್ದಾರೆ. ಏನೇ ಆಗಲಿ ಒಂದು ಒಳ್ಳೆಯ ಕೆಲಸಕ್ಕೆ ಸಾರ್ವಜನಿಕರ ಸಹಕಾರ ಕೂಡ ಬೇಕಲ್ಲವೇ ?

Edited By : Manjunath H D
Kshetra Samachara

Kshetra Samachara

20/04/2022 04:54 pm

Cinque Terre

113.52 K

Cinque Terre

7

ಸಂಬಂಧಿತ ಸುದ್ದಿ