ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಿವೃತ್ತಿಹೊಂದಿದ ಶುಶ್ರೂಷಕಿಗೆ ಗ್ರಾಮಸ್ಥರಿಂದ ಸನ್ಮಾನ

ಕುಂದಗೋಳ : ತಾಲೂಕಿನ ಯರಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶುಶ್ರೂಷಕಿ ಜಿ‌.ಟಿ.ಮೆದೆಗೋಪ ಅವರನ್ನು ಯರಗುಪ್ಪಿ ಗ್ರಾಮಸ್ಥರು ಸನ್ಮಾನ ಮಾಡಿ ಸ್ಮರಣಿಕೆ ನೀಡಿ ಗೌರವಿಸಿದರು.

ಬಳಿಕ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಶುಶ್ರೂಷಕಿ ನನ್ನ ವೃತ್ತಿಯನ್ನು ಮೆಚ್ಚಿ ಇಂತಹ ಸನ್ಮಾನ ಭಾಗ್ಯ ನೀಡಿದ ನಿಮಗೆ ಧನ್ಯವಾದಗಳು ನಿಮ್ಮೂರಿನ ಕರ್ತವ್ಯ ನಿಮ್ಮ ಸಹಕಾರ ನನಗೆ ಖುಷಿ ತಂದಿದೆ ಎಂದರು.

ಗುಡೇನಕಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸನ್ಮಾನ ಸ್ವೀಕರಿಸಿದ ಶುಶ್ರೂಷಕಿ ಜಿ‌.ಟಿ.ಮೆದೆಗೋಪ ಆನಂದಭಾಷ್ಪ ಹರಿಸಿ ಕಳೆದ 25 ವರ್ಷಗಳ ಗ್ರಾಮಸ್ಥರ ಸಹಕಾರ ನೆನೆದರು.

ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಗುರು ಹಿರಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

18/04/2022 02:39 pm

Cinque Terre

19.53 K

Cinque Terre

0

ಸಂಬಂಧಿತ ಸುದ್ದಿ