ಧಾರವಾಡ: ವಿವಿಧ ಬಣ್ಣಗಳಿಂದ ಅಲಂಕಾರಗೊಂಡು ,ವಿದ್ಯುತ್ ದೀಪಗಳಿಂದ ಚೆಂದಗೊಂಡು ನೋಡುಗರನ್ನ ಸೆಳೆಯುತ್ತಿರೋ ಈ ದೃಶ್ಯ ಕಂಡು ಬಂದಿದ್ದು ಧಾರವಾಡದ ಆಂಜನೇಯ ದೇವಸ್ಥಾನ ಒಂದರಲ್ಲೇ. ಹೌದು ಧಾರವಾಡದ ಲೈನ್ ಬಜಾರ್ ಹನುಮಾನ್ ದೇವಸ್ಥಾನದ ಸುತ್ತಲಿನ ದೃಶ್ಯ ಇದಾಗಿದೆ.
ಹನುಮಾನ್ ಜಯಂತಿ ಪ್ರಯುಕ್ತ ಧಾರವಾಡದ ಲೈನ್ ಬಜಾರ್ ಆಂಜನೇಯ ದೇವಸ್ಥಾನದಲ್ಲಿ ಅಂಜನಿ ಪುತ್ರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಆಂಜನೇಯ ಸ್ವಾಮಿ ದರ್ಶನ ಪಡೆಯಲು ಬರುವ ಭಕ್ತರಿಗೆ ಅನ್ನಸಂತರ್ಪಣೆ, ಮಜ್ಜಿಗೆ ನೀಡುವ ವ್ಯವಸ್ಥೆ ಕೂಡ ದೇವಸ್ಥಾನದ ಟ್ರಸ್ಟ್ ಕಮಿಟಿಯವರು ಮಾಡಿದ್ದರು.
ನಗರದ ಲೈನ್ ಬಜಾರ್ ಹನುಮಾನ್ ದೇವಸ್ಥಾನಕ್ಕೆ ಇತಿಹಾಸ ಇದ್ದು ಈಗ 53 ನೇ ವರ್ಷದ ರಥೋತ್ಸವದ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಮುಂಜಾನೆಯಿಂದ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ದೇವಸ್ಥಾನ ಕಮಿಟಿ ಕಾರ್ಯದರ್ಶಿ ರವಿ ಲಾಂಡೆ ಹೇಳಿದರು.
Kshetra Samachara
16/04/2022 01:29 pm