ಧಾರವಾಡ: ಮಿನಿ ವಿಧಾನಸೌಧ ಎಂದರೆ ಅಲ್ಲಿ ಎಲ್ಲಾ ಇಲಾಖೆಗಳು ಇರುತ್ತವೆ. ವಿವಿಧ ಇಲಾಖೆಗೆ ಕೆಲಸಕ್ಕೆಂದು ಪ್ರತಿನಿತ್ಯ ಸಾವಿರಾರು ಜನ ಬರುತ್ತಾರೆ. ಮಿನಿ ವಿಧಾನಸೌಧ ಎಂದರೆ ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಸಜ್ಜಿತವಾಗಿರಬೇಕಲ್ವೆ? ಆದರೆ, ಇದಕ್ಕೆ ತದ್ವಿರುದ್ಧವಾಗಿದೆ ಧಾರವಾಡ ಮಿನಿ ವಿಧಾಸೌಧ ರಸ್ತೆ.
ನೀವು ಈಗ ದೃಶ್ಯಗಳಲ್ಲಿ ನೋಡುತ್ತಿರುವ ಈ ರಸ್ತೆ ಧಾರವಾಡ ಮಿನಿ ವಿಧಾನಸೌಧ ರಸ್ತೆ. ಈ ರಸ್ತೆ ಡಾಂಬರು ಕಂಡು ದಶಕಗಳೇ ಕಳೆದಿವೆ.
ರಸ್ತೆ ಕೆಟ್ಟು ಅನೇಕ ವರ್ಷಗಳೇ ಕಳೆದಿದ್ದು, ಇದುವರೆಗೂ ಆ ರಸ್ತೆ ಸುಧಾರಣೆ ಕೆಲಸಕ್ಕೆ ಸಂಬಂಧಪಟ್ಟ ಇಲಾಖೆ ಮುಂದಾಗಿಲ್ಲ. ಪ್ರತಿನಿತ್ಯ ಮಿನಿ ವಿಧಾನಸೌಧಕ್ಕೆ ಕೆಲಸಕ್ಕೆಂದು ಬರುವ ಸಾರ್ವಜನಿಕರು ಈ ರಸ್ತೆಯಿಂದ ಕಂಗಾಲಾಗಿದ್ದಾರೆ. ಕೂಡಲೇ ಈ ರಸ್ತೆಯೆ ತುಸು ಡಾಂಬರು ಹಾಕಿ ರಸ್ತೆಯನ್ನು ಗಟ್ಟಿಗೊಳಿಸಬೇಕಾಗಿದೆ.
Kshetra Samachara
15/04/2022 02:12 pm