ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಒಂದು ಯೋಜನೆಯೂ ಸಹ ಸರಿಯಾಗಿ ನಡೆಯಲ್ಲ ಇಲ್ಲಿ ಇದು ಸಾಮಾನ್ಯ ಎನ್ನುವಂತಾಗಿದೆ. ಇದಕ್ಕೆ ಪುಷ್ಠಿ ನೀಡುವಂತಿದೆ ಬೃಹತ್ ಆಕಾರದಲ್ಲಿ ತಲೆ ಎತ್ತ ಬೇಕಿದ್ದ ಪ್ಲೈಓವರ್ ಆರಂಭದಲ್ಲಿಯೇ ಮುಗ್ಗರಿಸಿದ್ದು.
ಹೌದು.. ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ಲೈಓವರ್ ಕಾಮಗಾರಿ ಆರಂಭದಲ್ಲಿಯೇ ಅವ್ಯವಸ್ಥೆಯನ್ನುಂಟು ಮಾಡಿದೆ.
ಹುಬ್ಬಳ್ಳಿ ಹೊಸೂರು ವೃತ್ತದ ಬಳಿಯಲ್ಲಿ ಪಿಲ್ಲರ್ ನಿರ್ಮಾಣಕ್ಕೆ ಹಾಕಿದ್ದ ಕಬ್ಬಿಣದ ರಾಡ್ ಆರಂಭದ ಹಂತದಲ್ಲಿಯೇ ತಲೆ ಕೆಳಗೆ ಮಾಡಿದ್ದು, ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯನ್ನು ಉಂಟುಮಾಡುತ್ತಿದೆ.
ಕಾಮಗಾರಿ ಆರಂಭಗೊಂಡು ಸುಮಾರು ವರ್ಷ ಕಳೆದರೂ ಮುಗಿಯದ ಸ್ಮಾರ್ಟ್ ಸಿಟಿ ಕಾಮಗಾರಿಯಂತೆ ಪ್ಲೈಓವರ್ ಕೂಡ ನಗೆಪಾಟಲಿಗೆ ಗುರಿಯಾಗಿದೆ.
ಪ್ಲೈಓವರ್ ಕಾಮಗಾರಿಯನ್ನು ಜಾಂಡೂ ಪ್ರೈವೇಟ್ ಲಿಮಿಟೆಡ್ ಗೆ ಗುತ್ತಿಗೆ ನೀಡಿದ್ದು, ಈಗ ಪಿಲ್ಲರ್ ನಿರ್ಮಾಣಕ್ಕೆ ಬಹುತೇಕ ಕಡೆ ಗುಂಡಿ ತೆಗೆದು ಪಿಲ್ಲರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಆದರೆ ವಿಪರ್ಯಾಸಕರ ಸಂಗತಿಯಂದರೇ ಪಿಲ್ಲರ್ ನಿರ್ಮಾಣಕ್ಕೆ ಹಾಕಿದ್ದ ಕಬ್ಬಿಣದ ರಾಡ್(ಬಾರ್ ಬೈಂಡಿಂಗ್) ತಲೆ ಕೆಳಗಾಗಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಬಿರುಗಾಳಿ ಹಾಗೂ ಅತಿಯಾದ ಮಳೆ ಇಲ್ಲದೇ ಇರುವ ಸಂದರ್ಭದಲ್ಲಿಯೇ ಈ ರೀತಿ ಆದರೆ ಇನ್ನೂ ಮಳೆಗಾಲದ ಸಮಯದಲ್ಲಿ ಸಾರ್ವಜನಿಕರ ಗತಿ ಏನು ಎಂಬುವುದು ಯಕ್ಷ ಪ್ರಶ್ನೆಯಾಗಿದೆ.
Kshetra Samachara
13/04/2022 03:55 pm