ಧಾರವಾಡ: ಸದ್ಯ ಬೇಸಿಗೆ ಆರಂಭವಾಗಿರುವುದರಿಂದ ಅಲ್ಲಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಈ ತೊಂದರೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಧಾರವಾಡ ಬಸವ ಕಾಲೊನಿ ನಾಗರಿಕರ ಸೇವಾ ಸಂಘದ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಖಾಲಿ ಕೊಡಗಳನ್ನು ತಂದು ಪ್ರತಿಭಟನೆ ನಡೆಸಿದರು.
ವಾರ್ಡ್ ನಂಬರ್ 35ರ ಭೈರಿದೇವರಕೊಪ್ಪದ ಎಪಿಎಂಸಿ ಆವರಣದಲ್ಲಿ 1999ರಲ್ಲಿ ಹಮಾಲಿ ಕಾರ್ಮಿಕರಿಗಾಗಿ 132 ವಸತಿ ಗೃಹಗಳನ್ನು ನಿರ್ಮಿಸಿದ್ದು, ಇಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಆಸ್ಪತ್ರೆ, ಕಸ ವಿಲೇವಾರಿ ಘಟಕ, ಸಾರಿಗೆ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯವನ್ನು ಕಲ್ಪಿಸಿಲ್ಲ.
ಚುನಾವಣೆ ಬಂದಾಗೊಮ್ಮೆ ಮಾತ್ರ ಜನಪ್ರತಿನಿಧಿಗಳು ನಮ್ಮ ಬಳಿ ಬರುತ್ತಾರೆ. ಆನಂತರ ನಾವೇ ಅವರನ್ನು ಹುಡುಕಿಕೊಂಡು ಹೋಗುವಂತಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಮೊದಲು ನಮಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಆಗ್ರಹಿಸಿದರು.
Kshetra Samachara
11/04/2022 01:12 pm