ಕುಂದಗೋಳ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂಧನ ಬೆಲೆ ಏರಿಕೆ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ.
ಹರಗುವ, ರಂಟಿ ಹೊಡೆಯುವ, ರೂಟರ್ ಕೈಗೊಳ್ಳವ ರೈತಾಪಿ ಕಾಯಕಗಳಿಗೆ ಏರುತ್ತಿರುವ ಇಂಧನಗಳ ಬೆಲೆ ಜನರಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ. ಇದಲ್ಲದೆ ದಿನ ನಿತ್ಯ ಬಳಕೆಯ ಎಲ್ಲ ಸಾಮಗ್ರಿ ಹಾಗೂ ಪ್ರಯಾಣಕ್ಕೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ ತಟ್ಟಿ ಪ್ರಸ್ತುತ ಪೆಟ್ರೋಲ್ 109.12 ಪೈಸೆ ಡಿಸೇಲ್ 92.99 ಪೈಸೆ ಇದೆ. ಈ ವಿಚಾರವಾಗಿ ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ಸಂಕಷ್ಟ ಹೇಳಿಕೊಂಡಿದ್ದಾರೆ.
ಒಟ್ಟಾರೆ ಇಂಧನಗಳ ಬೆಲೆ ಏರಿಕೆ ಜನಸಾಮಾನ್ಯರ ಬದುಕಿಗೆ ಬರೆ ಎಳೆಯುತ್ತಿದ್ದು, ಸಾಧ್ಯವಾದಷ್ಟು ಬೆಲೆ ಇಳಿದರೆ ಸಾಕು ಎಂಬುದು ಜನಾಭಿಪ್ರಾಯ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
04/04/2022 06:40 pm