ಅಣ್ಣಿಗೇರಿ: ನಮಸ್ಕಾರ್ರೀ ವಾಯವ್ಯ ಕರ್ನಾಟಕ ಸಾರಿಗೆ ಅಧಿಕಾರಿಗಳ 63ನೇ ರಾಷ್ಟ್ರೀಯ ಹೆದ್ದಾರಿ ಒಳಗ ಇದ ಎಪ್ರಿಲ್ ಒಂದನೇ ತಾರೀಖ ಮುಂಜಾನೆ 8 ಗಂಟೆಯಿಂದ ನಲವಡಿ ಸುಂಕ ವಸೂಲಾತಿ ಕೇಂದ್ರ ಪ್ರಾರಂಭ ಆಗೈತ್ರಿ.
ಆದ್ರ ವಾಯುವ್ಯ ಕರ್ನಾಟಕದ ಕೆಲವೊಂದಿಷ್ಟು ಬಸ್ ನ್ಯಾಗ 37 ರೂಪಾಯಿ ಇದ್ದಿದ್ ಬಸ್ ಚಾರ್ಜ್ ಒಮ್ಮಿಂದೊಮ್ಮೆಲೆ 52 ರೂಪಾಯಿ ಮಾಡಿಬಿಟ್ಟಾರ್ರೀ..
ಸಾಹೇಬ್ರ ಸುಂಕ ವಸೂಲಾತಿ ಕೇಂದ್ರ ಚಾಲೂ ಆಗೇತಿ. ಅದಕ ನೀವು ಬಸ್ ಚಾರ್ಜ್ ಜಾಸ್ತಿ ಮಾಡಿರಿ ಒಪ್ಕೊತೇವಿ. ಆದರ 37 ರೂಪಾಯಿ ಬಸ್ ಚಾರ್ಜ್ ಇದ್ದಿದ್ದು ಒಮ್ಮೆ 52 ರೂಪಾಯಿ ಮಾಡಿದ್ರ ಹೆಂಗ್ ರೀ ಇದ ಸರಿ ಕಾನತೈತ್ತೇನ್ರಿ..
ಅಲ್ರಿ ಸಾಹೇಬರ.. ಒಮ್ಮಿಂದೆಮ್ಮಿಗೆ 15 ರೂಪಾಯಿ ಹೆಚ್ಚಗಿ ಮಾಡಿರಿ. ಹಿಂಗಂತ ನಾವು ಕೇಳಾಕತ್ತಿಲ್ಲರೀ ದಿನಾ ಹುಬ್ಬಳಿಗೆ ದುಡಿಯಾಕ ಹೋಗೊ ಮಂದಿ ಹೇಳಾಕತ್ತಾರಿ. ಉಪಜೀವನಕ್ಕಾಗಿ ಹುಬ್ಬಳಿಗೆ ಹೋಗಿ ಕೂಲಿ ಕೆಲಸ ಮಾಡೊ ಮಂದಿಗೆ ದುಡದ್ದಿದ್ದ ರೋಕ್ಕಾ ಎಲ್ಲಾ ಬಸ್ ಚಾರ್ಜ್ ಕೊಡುದಾದ್ರ ಹೇಂಗ್ ರೀ ಇದ ಬಾಳ ವಜ್ಜಿ ಅಂತ ಪ್ರಶ್ನೆ ಕೇಳಾಕತ್ತಾರೀ.
ಇನ್ನ ಇದರ ಬಗ್ಗೆ ನಮ್ಮ ವಾಯುವ್ಯ ಕರ್ನಾಟಕದ ಸಾರಿಗೆ ಸಂಸ್ಥೆ ಅಸಿಸ್ಟೆಂಟ್ ಟ್ರಾಫಿಕ್ ಸುಪ್ರಿಡೆಂಟ್ ಮಗಾಮಿ ಸಾಹೇಬರ ಏನ್ ಹೇಳತಾರ ಕೇಳ್ರಿ..
ಕಾಲ್ ರೆಕಾರ್ಡಿಂಗ್: ಮಗಾಮಿ ವಾಯುವ್ಯ ಕರ್ನಾಟಕದ ಸಾರಿಗೆ ಸಂಸ್ಥೆಯ ಅಸಿಸ್ಟೆಂಟ್ ಟ್ರಾಫಿಕ್ ಸುಪ್ರಿಡೆಂಟ್
ಅಲ್ರಿ ಸಾಹೇಬ್ರ ಟೋಲ್ ರೇಟ್ ಬಾಳ ಆಗೇತಿ ಅಂತ ಹೇಳಿ ಅದನ್ನ ಮಂದಿ ಮ್ಯಾಲ್ ಹಾಕಿದ್ರ ಹೇಂಗ್ ರೀ ಬಸ್ ಚಾರ್ಚಜ್ ಸ್ವಲ್ಪ ಕಡಿಮಿ ಮಾಡ್ರಿ..
-ನಂದೀಶ ಪಬ್ಲಿಕ್ ನೆಕ್ಸ್ಟ್ ಅಣಿಗೇರಿ
Kshetra Samachara
03/04/2022 03:53 pm