ಕುಂದಗೋಳ : ಪಟ್ಟಣದ 6ನೇ ವಾರ್ಡಿನಲ್ಲಿ ಹದಿನೈದನೇ ಹಣಕಾಸಿನ ಯೋಜನೆ ಅಡಿಯಲ್ಲಿ ತೋರಣಗಟ್ಟಿ ಬಳಿ 8 ಲಕ್ಷ 60ಸಾವಿರ ರೂಪಾಯಿ ವೆಚ್ಚದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಇಂದು ವಾರ್ಡಿನ ಸದಸ್ಯೆ ಸುನಿತಾ ಶಶಿಕಾಂತಗೌಡ ಪಾಟೀಲ ರವರು ಭೂಮಿಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಕೊಕಾಟೆ, ಉಪಾಧ್ಯಕ್ಷ ಹನುಮಂತಪ್ಪ ರಣತೂರ ಮತ್ತು ಪಟ್ಟಣ ಪಂಚಾಯತೀ ಸದಸ್ಯರಾದ ಮಲ್ಲಿಕಾರ್ಜುನ ಕಿರೇಸೂರ ಮತ್ತು ಬಸವರಾಜ ತಳವಾರ ಮತ್ತು ಊರಿನ ಪ್ರಮುಖರಾದ ಅಜ್ಜಪ್ಪ ಬಂಡಿವಾಡ, ಈರಪ್ಪ ಚುಳಕಿ, ದೇವೇಂದ್ರಪ್ಪ ಮಡಿವಾಳರ, ನಂದೀಶ್ ಹುಬ್ಬಳ್ಳಿಮಠ, ಶಶಿಕಾಂತಗೌಡ ಪಾಟೀಲ ಮತ್ತು ವಾರ್ಡಿನ ಪ್ರಮುಖರು ಪಾಲ್ಗೊಂಡಿದ್ದರು.
Kshetra Samachara
02/04/2022 10:25 pm