ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅಧಿಕಾರಿಗಳೇ ಕರೆಯಂಗಳಕ್ಕೆ ಬೇಕಿದೆ ಕಾಳಜಿ, ಕಾವಲು

ಕುಂದಗೋಳ: ಒಂದು ಕಾಲದಲ್ಲಿ ಇಡೀ ಕುಂದಗೋಳ ತಾಲೂಕಿನ ಜನರಿಗೆ ಕುಡಿಯುವ ನೀರಿನ ತಾಣವಾಗಿದ್ದ ಕೆರೆಯ ಅಂಗಳ ಈಗ ಬೇಸಿಗೆಯಲ್ಲಿ ಪಡ್ಡೆ ಹುಡುಗರ ಈಜುಕೊಳವಾಗಿ ಅಪಾಯ ಸೃಷ್ಟಿಸಿದೆ. ಹಾಗೂ ಇನ್ನೊಂದೆಡೆ ಕುರಿಗಳ ಜಲ ಕುಟೀರವಾಗಿ ದಾಹ ನೀಗಿಸುತ್ತಿದೆ.

ಕುಂದಗೋಳ ಪಟ್ಟಣದಲ್ಲಿ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಬಳಿ ಇರುವ ಕೆರೆಯಂಗಳ ವಿಸ್ತಾರ ನೋಡಿದ್ರೆ, ಇದು ಪುರಾತನ ಕಾಲದ ಕೆರೆ ಎಂದು ತಿಳಿಯುತ್ತದೆ. ಆದ್ರೇ ! ಈ ಕೆರೆಯ ಪ್ರಯೋಜನ ಮಾತ್ರ ಕುಂದಗೋಳದ ಜನತೆಗೆ ಇಲ್ಲದಂತಾಗಿದೆ.

ಈಗಾಗಲೇ ಕೆರೆಯಂಗಳದ ಸುತ್ತ ಹಗಲು ರಾತ್ರಿ ಕುಡುಕರ ಹೆಚ್ಚಾಗಿ ಎಲ್ಲೆಂದರಲ್ಲಿ ಸಾರಾಯಿ ಸೇವಿಸಿ ಬಾಟಲಿ ಪ್ಲಾಸ್ಟಿಕ್ ಗ್ಲಾಸ್ ಒಡೆದು ಬೀಸಾಕಿದ್ರೆ ಇನ್ನೊಂದೆಡೆ ಕೆರೆ ಕಟ್ಟೆ ಹಾಗೂ ಕಲ್ಲುಗಳು ಕಿತ್ತು ಕೆರೆ ಸುತ್ತ ಮುಳ್ಳು ಕಂಟಿ ಬೆಳೆಯುತ್ತಿವೆ. 2017ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅಭಿವೃದ್ಧಿಯಾದ ಕೆರೆ ಮರಳಿ ಅವ್ಯವಸ್ಥೆ ತಲುಪಿದೆ.

ಅದರಲ್ಲೂ ಈ ಪಡ್ಡೆ ಹುಡುಗರು ಕೆರೆಯಲ್ಲಿ ಈಜಾಟ ಆರಂಭಿಸಿ ಆಳವಾದ ಕೆರೆ ಸೃಷ್ಟಿಸಬಹುದಾದ ಅಪಾಯವನ್ನ ಮರೆತಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ದಯವಿಟ್ಟು ಈ ಬಗ್ಗೆ ಗಮನಿಸಿ ಕೆರೆಯ ಬಗ್ಗೆ ಕಾಳಜಿ ವಹಿಸಿ.

Edited By : Shivu K
Kshetra Samachara

Kshetra Samachara

01/04/2022 07:42 pm

Cinque Terre

22.96 K

Cinque Terre

0

ಸಂಬಂಧಿತ ಸುದ್ದಿ