ಧಾರವಾಡ: ಈ ಮಾರ್ಚ್ ತಿಂಗಳ ಬಂತಂದ್ರ ಸಾಕ. ನಮ್ಮ ಸರ್ಕಾರದ ವಿವಿಧ ಇಲಾಖೆಯೊಳಗ ಬಿಲ್ ತಗ್ಯಾಕ ಅದೇನ ನಾಟಕ ಮಾಡ್ತಾರೋ ಅದೇನ ಸರ್ಕಸ್ ಮಾಡ್ತಾರೋ ಅಬಬಬಾ. ಬ್ಯಾಡ ಬಿಡ್ರಿ ಅದರ ಕಥಿ ದೊಡ್ಡದೈತಿ.
ಈ ಬಿಲ್ ತಗಿಯೋದಕ್ಕೂ ನಾವೂ ಹೇಳುದಕ್ಕೂ ಏನ್ ಸಂಬಂಧ ಐತಿ ಅಂತಿರೆನ? ಸಂಬಂಧ ಐತ್ರಿ. ಇಲ್ನೋಡ್ರಿ ಇದು ಧಾರವಾಡ ಕಿಲ್ಲಾ ರಸ್ತೆ. ರಸ್ತೆ ತುಂಬ ತೆಗ್ಗ, ಗುಂಡಿ ಬಿದ್ದಾವ. ತೆಗ್ಗ, ಗುಂಡಿ ಬಿದ್ದಾವಂತ ನಮ್ಮ ಅಧಿಕಾರಿಗಳ ಸುಮ್ನ ಕುಂತಿಲ್ಲ. ಡಾಂಬರ್ ಹಾಕು ಕೆಲಸಾನೂ ಮಾಡ್ಯಾರ. ಅದೆಂಗ ಮಾಡ್ಯಾರ ಅಂದ್ರ ಹುಲ್ಲಾಗಿನ ನಾಯಿ ಅದೇನೋ ತಿಂದಂಗ ಅಂತಾರಲ್ಲ ಹಂಗ ಮಾಡ್ಯಾರ ನೋಡ್ರಿ.
ಮೊನ್ನೆ ಈ ರಸ್ತೆದಾಗಿನ ತೆಗ್ಗಿಗೆ ಡಾಂಬರ್ ಹಾಕ್ಯಾರ. ಅದೆಂಗ ಹಾಕ್ಯಾರ ಪಾ ಅಂದ್ರ ಒಂದ ತೆಗ್ಗ ಮುಚ್ಚಿ ಅದರ ಬಾಜುಕಿನ ತೆಗ್ಗ ಸದೇ ಇವ್ರು ನೋಡಿಲ್ಲ. ಡಾಂಬರ್ ಹೆಂಗ ಹಾಕ್ಯಾರ ಅಂದ್ರ ಹಿಂದ ನಾಯಿ ಬೆನ್ನ ಹತ್ತಿದಾವ್ರಂಗ ಹಂಗ ಡಾಂಬರ್ ಹಾಕಿದಾವ್ರ ಓಡಿ ಹೋಗ್ಯಾರ. ಆದ್ರ ಆ ಕೆಲಸ ಹೆಂಗ ಆಗೇತಿ ಅಂತ ನೋಡಾವ್ರೂ ಇಲ್ಲದಂಗ ಆಗೇತಿ. ಒಂದ ತೆಗ್ಗ ಮುಚ್ಚಿ ಒಂದ ತೆಗ್ಗ ಬಿಟ್ಟ ಒಟ್ಟ ಖರ್ಚ ತಗದಾರ ನೋಡ್ರಿ. ತೆಗ್ಗಿನ್ಯಾಗೂ ರೊಕ್ಕಾ ಮಾಡುವಂತ ಕೆಲಸ ಇಲ್ಲಿ ನಡದೈತಿ ಅಂತ ಈ ರಸ್ತೆ ನೋಡಿದಾವ್ರಿಗೆ ಗೊತ್ತಕ್ಕೈತಿ.
ಇನ್ನ ಮುಂದಿನ ವರ್ಷದ ಮಟಾ ಈ ರಸ್ತೆ ಹಿಂಗ ಬಿಡ್ತಾರೋ ಇನ್ನರ ಮತ್ತೊಂದ ಸಲಾ ಡಾಂಬರ್ ಹಾಕಿ ರಸ್ತೆ ರಿಪೇರಿ ಮಾಡ್ತಾರೋ ಇಲ್ಲೋ ಅನ್ನುದನ್ನ ಕಾದು ನೋಡುಣಂತ.
Kshetra Samachara
30/03/2022 07:52 pm