ಕುಂದಗೋಳ : ಪಟ್ಟಣದ 6ನೇ ವಾರ್ಡಿನಲ್ಲಿ 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ 7 ಲಕ್ಷ 64 ಸಾವಿರ ರೂಪಾಯಿ ವೆಚ್ಚದ ತೋರಣಗಟ್ಟಿ ಕೆರೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಇಂದು ವಾರ್ಡಿನ ಸದಸ್ಯೆ ಸುನೀತಾ ಶಶಿಕಾಂತಗೌಡ ಪಾಟೀಲರವರು ಭೂಮಿಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಕೊಕಾಟೆ, ಉಪಾಧ್ಯಕ್ಷ ಹನುಮಂತಪ್ಪ ರಣತೂರ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾರಾಯಣ್ ಡೊಂಬರ, ಪಟ್ಟಣ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ ಮತ್ತು ಊರಿನ ಪ್ರಮುಖ ಗಣ್ಯರು ಮತ್ತು ವಾರ್ಡಿನ ಪ್ರಮುಖರು ಪಾಲ್ಗೊಂಡಿದ್ದರು.
Kshetra Samachara
29/03/2022 03:36 pm