ಹುಬ್ಬಳ್ಳಿ: ಇವರೆಲ್ಲ 40 ವರ್ಷಗಳಿಂದ ಇದೇ ಸ್ಥಳದಲ್ಲಿ ತರಕಾರಿ ಮಾರುತ್ತ ತಮ್ಮ ಜೀವನವನ್ನು ನಡೆಸುತ್ತಿದ್ದವರು.ಆದ್ರೆ ಮಹಾನಗರ ಪಾಲಿಕೆ ಈಗ ಇವರ ಹೊಟ್ಟೆಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ.
ಹೌದು,ವಾರ್ಡ್ ನಂಬರ 27 ನವನಗರದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಮಹಾನಗಪಾಲಿಕೆ ಕಿತ್ತು ಹಾಕುತ್ತಿರುವುದರಿಂದ ನವನಗರದ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಪಾಲಿಕೆ ವಿರುದ್ಧ ಪ್ರತಿಭಟನೆ ಮಾಡಿ ತರಕಾರಿ ಮಾರುಕಟ್ಟೆಯನ್ನು ಕಿತ್ತು ಹಾಕದಂತೆ ವಲಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಈ ಮಾರುಕಟ್ಟೆಗೆ ನವನಗರದ ಸುತ್ತುಮುತ್ತಲಿನ ಗಾಮನಗಟ್ಟಿ, ಅಮರಗೋಳ, ಬೈರಿದೇವರಕೋಪ್ಪ, ಸುತ್ತಗಟ್ಟಿ, ರಾಯಾಪೂರ ಹೀಗೆ ಇನ್ನೂ ಕೆಲವು ಊರುಗಳಿಂದ ರೈತರು ತರಕಾರಿ ತಂದು ಮಾರುತ್ತಾರೆ. ಈಗ ದಿಢೀರನೆ ಈ ಜಾಗವನ್ನು ಖಾಲಿ ಮಾಡುವಂತೆ ಪಾಲಿಕೆಯವರು ಹೇಳುತ್ತಿದ್ದರಿಂದ ರೈತರು, ವ್ಯಾಪಾರಸ್ಥರು ಶಾಕ್ ಆಗಿದ್ದಾರೆ.
ಪಾಲಿಕೆ ಮಾರ್ಚ್ 31 ರವರೆಗೆ ಈ ಜಾಗ ಖಾಲಿ ಮಾಡಲು ವ್ಯಾಪರಸ್ಥರಿಗೆ ಗಡವು ಕೊಟ್ಟಿದೆ. ಈ ಜಾಗವನ್ನು ಕಬಳಿಸಲು ಕಾಣದ ಕೈಗಳು ಆಟವಾಡುತ್ತಿವೆ ಇದರ ಬಗ್ಗೆ ತನಿಕೆ ಆಗಬೇಕೆಂದು ಉತ್ತರ ಜನಶಕ್ತಿ ಸೇನಾ ಮುಖ್ಯಸ್ಥ ಎಸ್.ಎಸ್ ಶಂಕರಣ್ಣ ಅವರು ಪಾಲಿಕೆ ವಿರುದ್ಧ ಆಗ್ರಹಿಸಿದರು.
ಒಟ್ಟಿನಲ್ಲಿ ಇಷ್ಟು ವರ್ಷಗಳಿಂದ ಇದೇ ಜಾಗದಲ್ಲಿ ವ್ಯಾಪಾರ ಮಾಡುತ್ತ ಬಂದಿರುವ ನಮಗೆ ದಿಢೀರ್ ನೆ ಖಾಲಿ ಮಾಡಿ ಎಂದರೆ ಹೇಗೆ? ಈ ಜಾಗವನ್ನು ನಾವು ಪ್ರಾಣ ಹೊದರು ಬಿಡುವುದಿಲ್ಲ ಈ ಕುರಿತು ನಾವು ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಅಲ್ಲಿನ ವ್ಯಾಪಾರಸ್ಥರು ಹೇಳುತ್ತಿದ್ದಾರೆ.
Kshetra Samachara
26/03/2022 02:10 pm