* ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್
ಹುಬ್ಬಳ್ಳಿ: ಎಲ್ಲೆಂದರಲ್ಲಿ ಹರಿದು ಬಿದ್ದಿದ್ದ ವಿದ್ಯುತ್ ಕೇಬಲ್ ನಿಂದಾಗಿ ಜನರು ಆತಂಕಿತರಾಗಿದ್ದರು. ಈ ಕುರಿತು ʼಪಬ್ಲಿಕ್ ನೆಕ್ಸ್ಟ್ʼ ವರದಿ ಬಿತ್ತರಿಸಿದ 24 ಗಂಟೆಯಲ್ಲಿಯೇ ಎಚ್ಚೆತ್ತುಕೊಂಡ ಹೆಸ್ಕಾಂ ಅಧಿಕಾರಿಗಳು ಪರಿಶೀಲನೆ ನಡೆಸಿ ತ್ವರಿತ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಸಾರ್ವಜನಿಕರ ಸಮಸ್ಯೆಗೆ ಧ್ವನಿಯಾಗಿರುವ ʼಪಬ್ಲಿಕ್ ನೆಕ್ಸ್ಟ್ʼ ಇಂಪ್ಯಾಕ್ಟ್ ಇದಾಗಿದೆ.
ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಕೇಶ್ವಾಪೂರದಲ್ಲಿ ಹಲವು ದಿನಗಳಿಂದ ವಿದ್ಯುತ್ ಕೇಬಲ್ ಹರಿದು ಬಿದ್ದಿತ್ತು. ಅಲ್ಲದೆ, ಬೀದಿ ದೀಪ ಕಂಬದ ಕನೆಕ್ಷನ್ ಕೇಬಲ್ ಕೂಡ ಅಪಘಾತಕ್ಕೆ ಆಹ್ವಾನ ನೀಡುತ್ತಿತ್ತು. ಈ ಸಮಸ್ಯೆ ಬಗ್ಗೆ ಪಬ್ಲಿಕ್ ನೆಕ್ಸ್ಟ್ ʼಅನಾಹುತ ಆಗುವ ಮುಂಚೆ ಎಚ್ಚರ ಆಗ್ರಿʼ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ವರದಿ ಪ್ರಸಾರಗೊಂಡ ಬೆನ್ನಲ್ಲೇ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕೇಬಲ್ ಗಳಿಗೆ ಟೇಪ್ ಹಾಕಿ ಹಾಗೂ ಹೊರಬಿದ್ದ ಕೇಬಲ್ ವ್ಯವಸ್ಥಿತವಾಗಿ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ʼಪಬ್ಲಿಕ್ ನೆಕ್ಸ್ಟ್ʼನ ಜನಹಿತ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
-ಮಲ್ಲೇಶ ಸೂರಣಗಿ ʼಪಬ್ಲಿಕ್ ನೆಕ್ಸ್ಟ್ʼ ಹುಬ್ಬಳ್ಳಿ
Kshetra Samachara
25/03/2022 10:03 pm