ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್; ಆತಂಕಕ್ಕೆ ಕಾರಣವಾದ ವೈರಿಂಗ್ ಬೋರ್ಡ್ ದುರಸ್ಥಿ

ನವಲಗುಂದ: ಕಳೆದ ಎರಡು ತಿಂಗಳ ಹಿಂದೆ ನಿಮ್ಮ ಪಬ್ಲಿಕ್ ನೆಕ್ಸ್ಟ್ "ಆತಂಕಕ್ಕೆ ಕಾರಣವಾದ ಬೀದಿ ದೀಪದ ವೈರಿಂಗ್ ಬೋರ್ಡ್" ಬಗ್ಗೆ ಸುದ್ದಿಯನ್ನು ವರದಿ ಮಾಡಿತ್ತು. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ನೂತನ ವೈರಿಂಗ್ ಬೋರ್ಡ್ ಕೂರಿಸಿ, ಸಾರ್ವಜನಿಕರಲ್ಲಿನ ಆತಂಕವನ್ನು ದೂರ ಮಾಡಿದ್ದಾರೆ.

ನವಲಗುಂದ ಪಟ್ಟಣದ ಪ್ರಮುಖ ವೃತ್ತವಾದ ನೀಲಮ್ಮನ ಕೆರೆಯ ಎದುರು ಬೀದಿ ದೀಪದ ವೈರಿಂಗ್ ಬೋರ್ಡ್ ನೆಲಕ್ಕೆ ತಾಗಿದ ಸ್ಥಿತಿಯಲ್ಲಿತ್ತು. ಅಷ್ಟೇ ಅಲ್ಲದೆ ವೈರಿಂಗ್ ಬೋರ್ಡ್ ತೆರೆದಿದ್ದ ಪರಿಸ್ಥಿತಿಯಲ್ಲಿತ್ತು. ಇದರಿಂದ ಇಲ್ಲಿ ಸಂಚರಿಸುವ ವೃದ್ಧರು, ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರೆಲ್ಲರಿಗೂ ಆತಂಕ ಮನೆ ಮಾಡಿತ್ತು. ಈಗ ನೂತನ ವೈರಿಂಗ್ ಬೋರ್ಡ್ ಕೂರಿಸುವ ಮೂಲಕ ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

25/03/2022 03:33 pm

Cinque Terre

22.5 K

Cinque Terre

1

ಸಂಬಂಧಿತ ಸುದ್ದಿ