ನವಲಗುಂದ : ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಅವ್ಯವಸ್ಥೆಗೆ ಇಂದು ಸಾರ್ವಜನಿಕರು ಅಕ್ಷರಶಃ ಸಿಡಿದೆದ್ದಿದ್ರು. ಬಸ್ ಗಳನ್ನು ತಡೆದು, ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ, ಘಟಕ ವ್ಯವಸ್ಥಾಪಕರ ವಿರುದ್ಧ ಕಿಡಿ ಕಾರಿದ್ರು.. ಹೌದು… ನವಲಗುಂದ ಬಸ್ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಈಗಾಗಲೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ಹಲವಾರು ಬಾರಿ ಸುದ್ದಿಯನ್ನು ಬಿತ್ತರಿಸಿದೆ. ಇದಕ್ಕೆ ಕೇವಲ ಕಣ್ಣಿಗೆ ಮಣ್ಣೆರಚುವ ಕೆಲಸ ಮಾತ್ರ ಮಾಡಿದ್ದರು.
ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಹೊಲಸು ಹೊರಗಡೆ ಬರುತ್ತಿದೆ. ಚರಂಡಿ ಸಂಪೂರ್ಣ ಬ್ಲಾಕ್ ಆಗಿದೆ. ಬಸ್ ನಿಲ್ದಾಣ ದುರ್ವಾಸನೆ ಹೊಡೆಯುತ್ತಿದೆ. ಇದರಿಂದ ಬೇಸತ್ತ ಸ್ಥಳೀಯರು ಇಂದು ಪ್ರತಿಭಟನೆಗಿಳಿದಿದ್ರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆಯನ್ನು ಶಾಂತಗೊಳಿಸಲು ಮುಂದಾದರು. ಇನ್ನು ಇದೇ ಸಂದರ್ಭದಲ್ಲಿ ಬಂದ ಪುರಸಭೆ ಹಾಗೂ ಡಿಪೋ ಅಧಿಕಾರಿಗಳು ಹೇಳಿದ್ದು ಹೀಗೆ...
ಇನ್ನು ಘಟಕ ವ್ಯವಸ್ಥಾಪಕರು ಇನ್ನೆರಡು ದಿನಗಳಲ್ಲಿ ಕೆಲಸ ಮಾಡಿ ಕೊಡುವುದಾಗಿ ತಿಳಿಸಿದ್ದಾರೆ. ಆಗದೆ ಹೋದಲ್ಲಿ ಮತ್ತೆ ಪ್ರತಿಭಟನೆ ದಾರಿ ಹಿಡಿಯಬೇಕಾಗುತ್ತೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
Kshetra Samachara
24/03/2022 04:00 pm