ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹುತಾತ್ಮರ ದಿವಸವನ್ನ ವಿಭಿನ್ನವಾಗಿ ಆಚರಿಸಿದ ದೇಶಪಾಂಡೆ ಫೌಂಡೇಶನ್ ವಿದ್ಯಾರ್ಥಿಗಳು

ಪಬ್ಲಿಕ್ ನೆಕ್ಸ್ಟ್- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಇಂದು ಭಗತ್ ಸಿಂಗ್ ಅವರ ಬಲಿದಾನ ದಿನ, ಈ ದಿನವನ್ನು ಯುವಪಡೆಯೊಂದು ವಿಶೇಷವಾಗಿ ಆಚರಣೆ ಮಾಡುವುದರ ಮೂಲಕ ಗೌರವ ಸಲ್ಲಿಸಿದಿದ್ದಾರೆ.

ಹೌದು. ದೇಶಪಾಂಡೆ ಪೌಂಡೇಶನ್ ವಿದ್ಯಾರ್ಥಿಗಳು ಭಗತ್ ಸಿಂಗ್ ಅವರ ಬಲಿದಾನ ದಿನಾಚರಣೆ ಅಂಗವಾಗಿ ದೇಶಭಕ್ತಿ ಹಾಗೂ

ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಚೆನ್ನಮ್ಮ ಸರ್ಕಲ್, ಜನತಾ ಬಜಾರ್, ಭಗತ್‌ಸಿಂಗ್ ಸರ್ಕಲ್ ಸೇರಿದಂತೆ ಹಲವೆಡೆ ಕ್ಯಾಂಡಲ್ ಹಚ್ಚಿ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಇನ್ನು ನೀರು ಉಳಿವಿಗಾಗಿ, ಸರ್ಕಾರಿ ಶಾಲೆ ಉಳಿವಿಗಾಗಿ ದೇಶಪಾಂಡೆ ಫೌಂಡೇಶನ್ ವಿದ್ಯಾರ್ಥಿಗಳು, ಸರ್ಕಾರಿ ಶಾಲೆಗೆ ಹೋಗಿ ಮಕ್ಕಳ ಜೊತೆ ಸಂವಾದ ನಡೆಸಿ, ಮಧ್ಯಾಹ್ನದ ಊಟ ಬಡಿಸಿದ್ದಾರೆ. ಅಷ್ಟೇ ಅಲ್ಲದೆ ಜನತಾ ಬಜಾರ್, ಜನಸಂದಣಿ ಸ್ಥಳದಲ್ಲಿ ಹೋಗಿ ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಒಳ್ಳೆಯ ಸಂಗತಿ .

Edited By :
Kshetra Samachara

Kshetra Samachara

23/03/2022 05:51 pm

Cinque Terre

19.95 K

Cinque Terre

1

ಸಂಬಂಧಿತ ಸುದ್ದಿ