ವರದಿ: ಮಲ್ಲೇಶ ಸೂರಣಗಿ ʼಪಬ್ಲಿಕ್ ನೆಕ್ಸ್ಟ್ʼ ಹುಬ್ಬಳ್ಳಿ
ಹುಬ್ಬಳ್ಳಿ: ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾದ ನೈಋತ್ಯ ರೈಲ್ವೆ ವಲಯದಲ್ಲಿ ಸಾರ್ವಜನಿಕರು ಪರದಾಡುವಂತಾಗಿದೆ. ನಿಗದಿತ ವೇಳೆಗಿಂತ ರೈಲುಗಳು ತಡವಾಗಿ ಆಗಮಿಸುತ್ತಿವೆ. ಈ ನಿಟ್ಟಿನಲ್ಲಿ ಕಾರ್ಯ ಚಟುವಟಿಕೆಗಳಿಗೆ ಹೋಗಲು ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದು, ಜನರು ಪ್ರಯಾಣದ ಸಮಯಕ್ಕಿಂತ ಹೆಚ್ಚಾಗಿ ಮಾರ್ಗಮಧ್ಯೆಯೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ನೈಋತ್ಯ ರೈಲ್ವೆ ವಲಯ ಮಾತ್ರವಲ್ಲ ಬೆಂಗಳೂರು, ಮೈಸೂರು ವಿಭಾಗದಲ್ಲಿಯೂ ದ್ವಿಪಥ(ಡಬ್ಲಿಂಗ್), ಇಂಟರ್ ಲಾಕ್, ವಿದ್ಯುತ್ತೀಕರಣ ಕಾಮಗಾರಿ ಸಹಿತ ವಿವಿಧ ಕಾಮಗಾರಿಯಿಂದ ಬಹುತೇಕ ರೈಲು ಸಂಚಾರ ನಿಗದಿತ ವೇಳೆಗಿಂತ ತಡವಾಗಿ ಆಗಮಿಸಿ- ನಿರ್ಗಮಿಸುವುದರಿಂದ ಪ್ರಯಾಣಿಕರು ಸಮಸ್ಯೆಗೆ ಸಿಲುಕಿದ್ದಾರೆ. ಯಾವುದೇ ತುರ್ತು ಕಾರ್ಯಕ್ಕೆಂದು ರೈಲು ಹತ್ತಿದರೆ ಬಹುತೇಕ ಸಮಯ ಪ್ರಯಾಣದಲ್ಲಿಯೇ ಕಳೆದು ಹೋಗುವಂತಾಗಿದೆ!
ಈಗಾಗಲೇ ಕಾಮಗಾರಿ ಚುರುಕುಗೊಂಡಿದ್ದು, ರೈಲಿನ ಸ್ಪೀಡ್ ಹೆಚ್ಚಿಸಿ ಸಾರ್ವಜನಿಕರ ಸಮಸ್ಯೆ ಜೊತೆಗೆ ರೈಲ್ವೆ ವಲಯದಲ್ಲಿ ಸಮಯಕ್ಕೆ ಆದ್ಯತೆ ನೀಡಲು ಚಿಂತನೆ ನಡೆಸಿದ್ದೇವೆ ಎನ್ನುತ್ತಾರೆ ಅಧಿಕಾರಿಗಳು.
ಒಟ್ಟಿನಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡಿ, ಜನಪ್ರಿಯತೆ ಗಳಿಸಿದ್ದ ನೈಋತ್ಯ ರೈಲ್ವೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಜನಹಿತ ಕಾಪಾಡಬೇಕಿದೆ.
Kshetra Samachara
19/03/2022 07:58 am