ಕುಂದಗೋಳ: ನೆರೆಹಾವಳಿಗೆ ತುತ್ತಾದ ಮುಳ್ಳೊಳ್ಳಿ ಗ್ರಾಮವನ್ನು ಸ್ಥಳಾಂತರಗೊಳಿಸಿ ಹತ್ತು ವರ್ಷ ಕಳೆದರೂ ಮನೆಯ ಪಟ್ಟಾ ಬುಕ್ ನಮ್ಮ ಕೈ ಸೇರಿಲ್ಲ. ಹೀಗಾಗಿ ನಾವು ವಿದ್ಯುತ್ ಬಿಲ್ ತುಂಬಿಲ್ಲ. ಈಗ ನೋಡಿದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಖಂಡಿಸಿ ಮುಳ್ಳೊಳ್ಳಿ ಗ್ರಾಮಸ್ಥರು ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಗ್ರಾಮಸ್ಥರು ಕೋರ್ಟ್ ಹಾಲ್ ಆವರಣದ ಎದುರು ತಹಶೀಲ್ದಾರ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಹೆಸ್ಕಾಂ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಕಾಂಗ್ರೆಸ್ ಮುಖಂಡ ಮುತ್ತಣ್ಣ ಶಿವಳ್ಳಿ, ಸೇರಿದಂತೆ ಕೆಲ ವಯೋವೃದ್ಧೆಯರು ತಮ್ಮ ಆಕ್ರೋಶ ಹೊರಹಾಕಿದರು. ಈ ಪ್ರತಿಭಟನೆ ನಡುವೆ ಮುಳ್ಳೊಳ್ಳಿ ಗ್ರಾಮಸ್ಥನೊಬ್ಬ ಸಿನಿಮಾ ಹಾಡು ಹೇಳುತ್ತಾ ಪ್ರತಿಭಟನೆ ನಡೆಸಿದ್ದು ಕಂಡು ಬಂದಿತು.
ಕಳೆದ ಹತ್ತು ವರ್ಷಗಳಿಂದ ವಾಸವಿರುವ ಮನೆಯ ಪಟ್ಟಾಬುಕ್ ನೀಡಿಲ್ಲ. ಈಗ ವಿದ್ಯುತ್ ಬಿಲ್ ತುಂಬಿ ಅಂತಾರೇ, ನಮ್ಮ ಮನೆ ಪತ್ರ ನೀಡಿ ವಿದ್ಯುತ್ ಬಿಲ್ ತುಂಬುತ್ತೇವೆ ಎಂದ ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿ ಮುಖ್ಯ ಬಾಗಿಲು ಎಳೆದು ಮುಚ್ಚಲು ಮುಂದಾದಾಗ ಪೊಲೀಸರು ಪುನಃ ಬಾಗಿಲು ತೆರೆಸಿದರು.
Kshetra Samachara
16/03/2022 08:02 pm