ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಬು.ತರ್ಲಘಟ್ಟ ಕೆರೆ ಹೂಳೆತ್ತುವಿಕೆ; ಧರ್ಮಸ್ಥಳ ಯೋಜನೆ ನೆರವು

ಕುಂದಗೋಳ: ಇಲ್ಲೊಂದು ಗ್ರಾಮದ ಕೆರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಾಯಹಸ್ತದಲ್ಲಿ "ನಮ್ಮ ಊರು- ನಮ್ಮ ಕೆರೆ" ಯೋಜನೆಯಡಿ ಕೆರೆ ಹೂಳೆತ್ತುವ ಭಾಗ್ಯ ಒದಗಿ ಬಂದಿದೆ.

ಹೌದು. ಕುಂದಗೋಳ ತಾಲೂಕಿನ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯವಾಗಿ ಧರ್ಮಸ್ಥಳ ಸಂಘದ ಸದಸ್ಯರ ಮನವಿ ಫಲವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ 6.24 ಲಕ್ಷ ರೂ. ವೆಚ್ಚದಲ್ಲಿ 7 ಎಕರೆ ಪ್ರದೇಶದ ಕೆರೆಯಲ್ಲಿ ಸಂಪೂರ್ಣ 2 ಎಕರೆ ಕೆರೆಯನ್ನು ಹೂಳೆತ್ತಿ ಪುನಶ್ಚೇತನಗೊಳಿಸುವ ಕಾರ್ಯವನ್ನು ಕಳೆದ 20 ದಿನಗಳಿಂದ ನಡೆಸುತ್ತಿದೆ.

ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದ್ದು, ಬು.ತರ್ಲಘಟ್ಟ ಗ್ರಾಮದ ಅದೆಷ್ಟೋ ಮಹಿಳೆಯರಿಗೆ, ನಾಗರಿಕರಿಗೆ ಕೆರೆ ಹೂಳೆತ್ತುವ ಕಾಮಗಾರಿಯಿಂದ ಉದ್ಯೋಗ ಲಭಿಸಿದ್ರೆ, ರೈತರು ಕೃಷಿ ಇತರ ಕೆಲಸಕ್ಕೆ ಕೆರೆಯ ಮಣ್ಣು ಉಪಯೋಗದ ಜೊತೆಗೆ ಕೆರೆ ಅಭಿವೃದ್ಧಿಯಿಂದ ಗ್ರಾಮದ ಜನರಿಗೆ, ಜಾನುವಾರುಗಳಿಗೆ ನೀರಿನ ಅಭಾವ ನೀಗಲಿದೆ‌. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಅಭಿವೃದ್ಧಿ ಕಾರ್ಯ ಮುನ್ನಡೆಸುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

16/03/2022 03:56 pm

Cinque Terre

15.16 K

Cinque Terre

0

ಸಂಬಂಧಿತ ಸುದ್ದಿ