ಅಳ್ನಾವರ : ಸುಮಾರು ಹದಿನೆಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಾಡ ಕಚೇರಿ ಕಟ್ಟಡಕ್ಕೆ ಕಲಘಟಗಿ ಶಾಸಕ ಸಿ.ಎಮ್.ನಿಂಬಣ್ಣವರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿ ಕ್ಷೇತ್ರಕ್ಕೆ ಮಂಜೂರಾಗಿರುವ ನೂರಾರು ಕೋಟಿ ಅನುದಾನದಡಿ ರಸ್ತೆ, ಸೇತುವೆಗಳು, ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲವೊಂದು ಪೂರ್ಣಗೊಂಡಿದ್ದು ಬಾಕಿ ಇರುವ ಕೆಲಸಗಳನ್ನು ನಿಗದಿತ ಸಮಯದೊಳಗೆ ಮುಗಿಸಲು ಸೂಚಿಸಲಾಗಿದೆ ಎಂದರು.
ಸರ್ಕಾರದ ಯೋಜನೆಗಳನ್ನು ಜನರ ಮನೆಯ ಬಾಗಿಲಿಗೆ ತಲುಪಿಸಲು ಹಲವಾರು ಕಾರ್ಯಕ್ರಮಗಳನ್ನು ಸರಕಾರ ಜಾರಿಗೆ ತಂದಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕರು ಕರೆ ನೀಡಿದರು.
ಪ.ಪಂ ಅಧ್ಯಕ್ಷೆ ಮಂಗಲಾ ರವಳಪ್ಪನವರ, ನದೀಮ ಕಂಟ್ರಾಕ್ಟರ, ನೇತ್ರಾವತಿ ಕಡಕೋಳ, ಲಿಂಗರಾಜ ಮೂಲಿಮನಿ, ಪ್ರವೀಣ ಪವಾರ, ತಹಶೀಲ್ದಾರ್ ಅಮರೇಶ ಪಮ್ನಾರ ಮತ್ತಿತರರು ಇದ್ದರು.
ವರದಿ : ಗುರುರಾಜ್ ಸಬ್ನಿಸ್
Kshetra Samachara
13/03/2022 05:44 pm