ಹುಬ್ಬಳ್ಳಿ: ಇಲ್ಲಿ ವಾರಕ್ಕೊಂದು ಬಾರಿ ಕುಡಿಯುವ ನೀರು ಸರಬರಾಜು ಆಗುತ್ತೆ. ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿನ ಜೊತೆ ಚರಂಡಿ ನೀರು ಕೂಡಿಕೊಂಡು ಕಲುಷಿತವಾಗಿ ಬರುತ್ತಿದೆ. ಹೀಗಾಗಿ ಸ್ಥಳೀಯರಲ್ಲಿ ಆರೋಗ್ಯ ಕೆಡುವ ಆತಂಕ ಮೂಡಿದೆ.
ಹೀಗೆ ಬಂದ ನೀರನ್ನು ಸಂಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿರುವ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ವಾರ್ಡ್ ನಂ. 63ರಲ್ಲಿ ಬರುವ ಚನ್ನಪೇಟೆ. ಇಲ್ಲಿನ ನಿವಾಸಿಗಳು ಈ ವಾರ್ಡ್ ಸದಸ್ಯೆ ರಾಧಾಭಾಯಿ ಸಫಾರೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಎಷ್ಟೋ ಸಾರಿ ಮನವಿ ನೀಡಿದ್ದಾರೆ. ಆದ್ರೂ ಕೂಡ ಇತ್ತ ಯಾರು ಕೂಡ ತಿರುಗಿ ನೋಡಿಲ್ಲವಂತೆ. ಇದರಿಂದಾಗಿ ಈ ಪ್ರದೇಶದಲ್ಲಿ ಇಂದು ಕುಡಿ ನೀರನ್ನು ಬಿಟ್ಟಿದ್ದಾರೆ. ನೀರಿನ ಜೊತೆ ಚರಂಡಿ ನೀರು ಕಲುಷಿತವಾಗಿ ಬಂದಿರುವುದರಿಂದ ಕುಡಿಯಲು ನೀರು ಸ್ವಚ್ಛ ನೀರು ಸಿಗದಂತಾಗಿದೆ.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇಲ್ಲಿನ ಚರಂಡಿ ಸಮಸ್ಯೆಯನ್ನು ಬಗೆಹರಿಸಿ ಜನರಿಗೆ ಕುಡಿಯುವ ನೀರು ಒದಗಿಸಬೇಕೆಂದು ಜನ ಒತ್ತಾಯಿಸಿದ್ದಾರೆ.
Kshetra Samachara
08/03/2022 11:20 am