ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸಾರ್ವಜನಿಕರ ದಾಹ ನೀಗಿಸಿದ ಗ್ರಾಮ ಲೆಕ್ಕಾಧಿಕಾರಿ !

ಕುಂದಗೋಳ: ಇಲ್ಲಿಯ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ಆಗಮಿಸುವ ಜನರು ಕುಡಿಯಲು ನೀರು ಇಲ್ಲದೇ ಕಳೆದ ಹಲವಾರು ವರ್ಷಗಳಿಂದ ಪರದಾಡುತ್ತಿದ್ದರು. ಆದರೆ, ಈಗ ಜನರ ದಾಹವನ್ನು ಗ್ರಾಮ ಲೆಕ್ಕಾಧಿಕಾರಿ ಒಬ್ಬರು ನೀಗಿಸುವ ಮೂಲಕ ಪುಣ್ಯದ ಕೆಲಸ‌ ಮಾಡಿದ್ದಾರೆ.

ನಿತ್ಯ ಬೆಳಗಾದ್ರೇ ಸಾಕು ನೂರೆಂಟು ಕಚೇರಿ ಕೆಲಸ ಹೊತ್ತು, ಕುಂದಗೋಳ ತಹಶೀಲ್ದಾರ ಕಚೇರಿಗೆ ಬರುವ 57 ಹಳ್ಳಿಯ ಸಾರ್ವಜನಿಕರು ಹಾಗೂ ಇಲಾಖೆಯ ಅಧಿಕಾರಿ,ಸಿಬ್ಬಂದಿಗಳಿಗೆ ಕಚೇರಿಯಲ್ಲಿ ಕುಡಿಯಲು ನೀರು ಇರಲೇ ಇಲ್ಲ.

ಇನ್ನೂ ತಹಶೀಲ್ದಾರ ಕಚೇರಿ ಹೊರಗೆ ಒಂದು ನಲ್ಲಿ ಇತ್ತಾದರೂ, ಆ ನೀರು ಸವಳು ಎಂಬ ಕಾರಣಕ್ಕೆ ಅದು ಕುಡಿಯಲು ಯೋಗ್ಯವಾಗಿರದೇ ಬಳಕೆಗೆ ಮಾತ್ರ ಸೀಮಿತವಾಗಿತ್ತು.

ಈ ವಿಷಯವನ್ನು ಅರಿತ ಗ್ರಾಮ ಲೆಕ್ಕಾಧಿಕಾರಿ ಮಹಮ್ಮದ್ ಸಾದಿಕ್ ಸೌದಾಗರ ಅವರು ಇಲಾಖೆಯಲ್ಲಿ ನೀರನ್ನು ಶುದ್ಧಿಕರೀಸುವ ಯಂತ್ರ ಅಳವಡಿಸಿ, ಜನರ ದಾಹ ನೀಗಿಸುವ ನಿಟ್ಟಿನಲ್ಲಿ ಗ್ಲಾಸ್ ಇಟ್ಟು, ಈ ಬೇಸಿಗೆಯ ದಿನದಲ್ಲಿ ಕಚೇರಿಗೆ ಬರುವ 57 ಹಳ್ಳಿಯ ಸಾರ್ವಜನಿಕರು ಹಾಗೂ ಅಧಿಕಾರಿ ಸಿಬ್ಬಂದಿಗಳ ದಾಹ ನೀಗಿಸಿದ್ದಾರೆ.

Edited By : Shivu K
Kshetra Samachara

Kshetra Samachara

02/03/2022 11:03 pm

Cinque Terre

31.45 K

Cinque Terre

4

ಸಂಬಂಧಿತ ಸುದ್ದಿ