ಕುಂದಗೋಳ: ಛೇ.. ಛೇ.. ಈ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ಕಥಿ ಏನ್ರೀಪಾ ? ಈಗಾಗಲೇ ಬ್ರಿಡ್ಜ್ ಕಾಮಗಾರಿ 90% ಮುಗಿದೇತಿ ಇನ್ನುಳಿದ ಕಾಮಗಾರಿ ಮಾಡಾಕ್ ಫೆ.25 ಮೊನ್ನಿಯಿಂದ ಮಾ.16ತನಕ ಬ್ರಿಡ್ಜ್ ಸಂಚಾರ ಕ್ಲೋಸ್ ಮಾಡ್ಯಾರಾ ಅಲ್ರೀ.
ಈ ವಿಷಯ ಸ್ವಲ್ಪ ಮಂದಿಗೆ ಗೊತ್ತ್, ಇನ್ನ್ ಸ್ವಲ್ಪ ಮಂದಿಗೆ ಗೊತ್ತಿಲ್ಲ. ಹಿಂಗ್ಯಾಗಿ ಜನ ಬ್ರಿಡ್ಜ್‌ವರೆಗೂ ಬರೋದು ಹೊಳ್ಳಿ ಹೋಗೋದು ಒಂದ್ ಕಡಿ ಆದ್ರ, ಈ ರೋಗಿ, ಗರ್ಭಿಣಿ ಕರೆತಂದ ವಾಹನಗಳು ಬ್ರಿಡ್ಜ್ ಕೆಲಸಗಾರರ ಜೊತೆ ವಾಗ್ವಾದ ಸಹ ಮಾಡಾಕತ್ತಾರ್ ನೋಡ್ರಿ ಪಾ.
ಇನ್ನೂ ಕೆಲವೊಂದಿಷ್ಟು ಮಂದಿ ನೋಡ್ರಿಲ್ಲೇ ಬ್ರಿಡ್ಜ್ ಕೆಳಗೆ ರೈಲ್ವೆ ಟ್ರ್ಯಾಕ್ ಮ್ಯಾಲ್ ಬೈಕ್ ಎತ್ತಿ ಎತ್ತಿ ಆ ಕಡೆಗೆ ಇಡಾಕತ್ತಾರ್ ಶಿವಾ.. ಶಿವಾ.. ಏನಾರ್ ಅನಾಹುತ್ ಆದ್ರ ಯಾರು ಜವಾಬ್ದಾರಿ? ನೋಡ್ರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ, ಮೊದ್ಲ ಶಿರೂರು ಬ್ರಿಡ್ಜ್ ಸಂಚಾರ್ ಮುಂದ್ ಕ್ಲೋಸ್ ಐತಿ ಅಂತ್ಹೇಳಿ ಹತ್ತ್ ಕಿಲೋ ಮೀಟರ್ ಅಡ್ವಾನ್ಸ್ ಬೋರ್ಡ್ ಹಾಕ್ರಿ. ಇಲ್ನೋಡ್ರಿ ಇಲ್ಲೇ ಬೈಕ್ ಹೆಂಗ್ ರೈಲ್ವೆ ಟ್ರ್ಯಾಕ್ ದಾಟಸಾತಾರ್ ಇವ್ರ ಮ್ಯಾಲ್ ಚಲೋ ಕ್ರಮ ತಗೋರಿ.
Kshetra Samachara
28/02/2022 01:46 pm