ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಟೋ ಮೀಟರ್ ಇದ್ದರೂ ಹಾಕಲ್ಲ-ಜನ ನೋಡಿದ್ರು ಕೇಳಲ್ಲ !

-ಈರಣ್ಣ ವಾಲಿಕಾರ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ರಾಜ್ಯದ ಎರಡನೇ ದೊಡ್ಡ ಮಹಾನಗರ. ಇಲ್ಲಿ ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ.ಅದೇ ರೀತಿ ದಿನದಿಂದ ದಿನಕ್ಕೆ ನಗರವೂ ಬೆಳೆಯುತ್ತಿಲೇ ಇದೆ. ಇಂತಹ ನಗರದಲ್ಲಿ ಆಟೋಗಳ ಸಂಖ್ಯೆಯು ಹೆಚ್ಚಾಗಿಯೇ ಇದೆ. ಆದರೆ ಆಟೋದವರು ಮೀಟರ್ ಇದ್ದರು ಯಾರೂ ಹಾಕೋದೇ ಇಲ್ಲ ಅನ್ನೋ ಆರೋಪ ಇದ್ದೇ ಇದೆ. ಅದು ಆಗಾಗ ಕೇಳಿ ಬರ್ತಾನೆ ಇದೆ. ಈಗಲೂ ಅದು ಚಾಲ್ತಿಯಲ್ಲಿದೆ.

ಸರ್ಕಾರ ಆಟೋಗಳಿಗೆ ಮೀಟರ್ ಕಡ್ಡಾಯ ಮಾಡಿದೆ. ಆದರೆ, ಅದು ಕೇವಲ ನಾಮ್ ಕೇ ವಾಸ್ತೆಗೆ ಮಾತ್ರ ಸೀಮಿತವಾಗಿದೆ. ಸಾರ್ವಜನಿಕರಿಗೆ ನ್ಯಾಯಯುತ ಆಟೋಸೇವೆ ಲಭ್ಯವಾಗಬೇಕೆಂದು ಸರ್ಕಾರ ಮೀಟರ್‌ ಕಡ್ಡಾಯಗೊಳಿಸಿದೆ. ಆದರೆ ಅದು ನಗರದಲ್ಲಿ ಪಾಲನೆಯಾಗುತ್ತಿಲ್ಲ. ಆಟೋಗಳಲ್ಲಿ ಮೀಟರ್ ಅಳವಡಿಸಲಾಗಿದ್ದು ಹಲವು ವರ್ಷಗಳಿಂದ ಬಳಕೆನೇ ಆಗುತ್ತಿಲ್ಲ.

ಸಾರ್ವಜನಿಕರು ಆಟೋ ಹತ್ತುವಾಗ ಮೀಟರ್ ಕೇಳುವುದಿಲ್ಲ. ಅವರು ತೆರಳುವ ಸ್ಥಳ ತಲುಪಲು ಇಂತಿಷ್ಟು ಹಣ ನೀಡುವುದಾಗಿ ಮಾತುಕತೆ ನಡೆಸಿ ವ್ಯವಹಾರ ಕುದುರಿಸಿಯೇ ಆಟೋ ಹತ್ತುತ್ತಾರೆ. ಮೀಟರ್ ಕಡ್ಡಾಯವಾದರೆ ಇದಕ್ಕೆ ಅವಕಾಶ ಸಿಗುವುದಿಲ್ಲ. ಇನ್ನು ಅನೇಕರು ಚೌಕಾಸಿ ಮಾಡುತ್ತಾರೆ. ಹಲವರು ಸೀಟುಗಳ ಲೆಕ್ಕದಲ್ಲಿ ಆಟೋದಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಮೀಟರ್‌ ಕಡ್ಡಾಯ ಮಾಡಿದರೂ ಪ್ರಯೋಜನವಿಲ್ಲ. ಆದರೆ, ಇಲ್ಲಿನ ಸಮಸ್ಯೆಗಳ ಬಗ್ಗೆ ಆಟೋ ಚಾಲಕರು ಏನು ಹೇಳುತ್ತಾರೆ ಕೇಳಿ....

ಈ ಹಿಂದೆ ಪಾಲಿಕೆಯಿಂದ ಆಟೋ ನಿಲ್ದಾಣಗಳು ಸ್ಥಾಪನೆ ಆಗಿದ್ದವು. ಈಗ ಅವುಗಳಲ್ಲಿ ಬಹುತೇಕ ಮಾಯವಾಗಿವೆ. ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿದ್ದ ಆಟೋ ನಿಲ್ದಾಣದ ನಾಮಫಲಕ ತೆರವುಗೊಳಿಸಲಾಗಿದೆ ಎಂಬುದು ಆಟೋ ಚಾಲಕರ ಗೋಳು. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಅವರ ಬೇಡಿಕೆ ಈಡೇರಿಸಿ ಮೀಟರ್ ಹಾಕಲು ಸೂಚನೆ ನೀಡಬೇಕಾಗಿದೆ.

Edited By : Nagesh Gaonkar
Kshetra Samachara

Kshetra Samachara

23/02/2022 05:35 pm

Cinque Terre

64.35 K

Cinque Terre

11

ಸಂಬಂಧಿತ ಸುದ್ದಿ