ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸಂಶಿ- ಚಾಕಲಬ್ಬಿ ರಸ್ತೆ ಅವ್ಯವಸ್ಥೆ, ದುರಸ್ತಿಗೆ ಆಗ್ರಹ

ಕುಂದಗೋಳ: ತಾಲೂಕಿನ ಸಂಶಿ ಗ್ರಾಮದಿಂದ ಚಾಕಲಬ್ಬಿಗೆ ಸಂಪರ್ಕ ಕಲ್ಪಿಸುವ ಕೇವಲ 7 ಕಿ.ಮೀ ರಸ್ತೆ ದುರಸ್ತಿ ಬಗ್ಗೆ ಲೋಕೋಪಯೋಗಿ ಮುಂದಾಗುತ್ತಿಲ್ಲ. ಪರಿಣಾಮ ಈ ಮಾರ್ಗವಾಗಿ ಸಾಗುವ ಸವಾರರು, ಚಾಲಕರು ಪ್ರಾಣ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಸ್ತೆ ದುರಸ್ತಿ ಸಂಬಂಧ ಚಾಕಲಬ್ಬಿ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಇದಕ್ಕೆ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡ ಗ್ರಾಮಸ್ಥರು, ಡಾಂಬರ್ ಕಿತ್ತು ಹಾಳಾದ ಸಂಶಿ-ಚಾಕಲಬ್ಬಿ ರಸ್ತೆಯ ವಿಡಿಯೋವನ್ನು ಪಬ್ಲಿಕ್ ನೆಕ್ಸ್ಟ್'ಗೆ ಕಳುಹಿಸಿ ಸಮಸ್ಯೆ ತಿಳಿಸಿದ್ದಾರೆ.

ಇನ್ನಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಂಶಿ- ಚಾಕಲಬ್ಬಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಸ್ತಿ ಕಡೆಗೆ ಗಮನ ಕೊಡಲಿ ಎಂದು ಚಾಕಲಬ್ಬಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವೀಕ್ಷಕರ ವರದಿ

Edited By : Manjunath H D
Kshetra Samachara

Kshetra Samachara

17/02/2022 10:47 pm

Cinque Terre

17 K

Cinque Terre

0

ಸಂಬಂಧಿತ ಸುದ್ದಿ