ಕುಂದಗೋಳ : ಗ್ರಾಮದಲ್ಲಿ ನೀರಿನ ಟ್ಯಾಂಕ್ ಸೌಲಭ್ಯ ಇದೆ ಆದರೆ ಅದು ಅವ್ಯವಸ್ಥೆಯಿಂದ ಕೂಡಿದ ಕಾರಣ ಜನ ಅನಿವಾರ್ಯವಾಗಿ ಕೆರೆ ನೀರನ್ನು ತರುವ ಪರಿಸ್ಥಿತಿ ನಿರ್ಮಾಣವಾದ ಸನ್ನಿವೇಶ ಪಶುಪತಿಹಾಳ ಗ್ರಾಮದಲ್ಲಿ ಸಾಮಾನ್ಯವಾಗಿತ್ತು.
ಜನರ ಈ ಪಾಡು ಕಂಡ ನಿಮ್ಮ ಪಬ್ಲಿಕ್ ನೆಕ್ಸ್ಟ್ ಟ್ಯಾಂಕ್ ಇದೆ ನೀರಿಲ್ಲಾ ! ಜನರ ನಿತ್ಯದ ಈ ಪರಿಸ್ಥಿತಿ ಕೇಳೋರಿಲ್ಲ ಎಂಬ ಶೀರ್ಷಿಕೆಯಡಿ ವರದಿವೊಂದನ್ನು ಪ್ರಕಟಿಸಿತ್ತು.
ಸದ್ಯ ನಮ್ಮ ವರದಿಯಿಂದ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ನೀರಿನ ಟ್ಯಾಂಕ್ ಗಳನ್ನು ದುರಸ್ಥಿಗೊಳಿಸಿ ಜನ ನೀರಿಗಾಗಿ ಅಲೆದಾಡುವ ಪರಿಯನ್ನು ತಪ್ಪಿಸಿದೆ.
ಇನ್ನು ಟ್ಯಾಂಕ್ ಮೂಲಕ ನೀರಿನ ಸೌಲಭ್ಯ ಪುನರಾರಂಭಗೊಂಡ ವಿಡಿಯೋವನ್ನು ಪಬ್ಲಿಕ್ ನೆಕ್ಸ್ಟ್ ಗೆ ಕಳುಹಿಸಿದ ಜನ ಸಂತಸ ವ್ಯಕ್ತಪಡಿಸಿದ್ದಾರೆ.
-ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ ಶ್ರೀಧರ ಪೂಜಾರ
Kshetra Samachara
16/02/2022 04:16 pm