ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ವಚ್ಛ ಭಾರತದ ಯೋಜನೆ ಅಣಕಿಸುವಂತಿದೆ ಹುಬ್ಬಳ್ಳಿ ಬಸ್ ನಿಲ್ದಾಣ: ಯಾರಿಗೂ ಇಲ್ಲ ಕಾಳಜಿ

ಹುಬ್ಬಳ್ಳಿ: ಸ್ವಚ್ಛ ಭಾರತ ಯೋಜನೆಯನ್ನು ಸಾಕಷ್ಟು ಸಂಭ್ರಮದಿಂದ ಸ್ವಾಗತಿಸಿದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅವ್ಯವಸ್ಥೆ ಗೋಚರಿಸುತ್ತಲೇ ಇದೆ. ಇದಕ್ಕೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣ ಕೂಡ ಹೊರತಾಗಿಲ್ಲ. ಇಲ್ಲಿನ ಅವ್ಯವಸ್ಥೆ ನೋಡಿದರೇ ನಿಜಕ್ಕೂ ಬೇಸರ ಮೂಡುವುದಂತೂ ಸತ್ಯ.

ಹೌದು.. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗೋಕುಲ ರೋಡ್ ಹೊಸ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮಲ ಮೂತ್ರ ವಿಸರ್ಜನೆ, ಬೇಕಾಬಿಟ್ಟಿಯಾಗಿ ಎಸೆದಿರುವ ತ್ಯಾಜ್ಯ, ಕಿತ್ತು ಹೋದ ರಸ್ತೆಗಳು, ವಿಲೇವಾರಿಯಾಗದ ಕಸ ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳ ಸರಮಾಲೆಯೇ ಈ ಬಸ್ ನಿಲ್ದಾಣದಲ್ಲಿದೆ.

ಸ್ವಚ್ಚತೆಯ ಕುರಿತಾದ ಸಾಕಷ್ಟು ಅಭಿಯಾನಗಳನ್ನು ಮಾಡಿದರೂ ಯಾವುದಕ್ಕೂ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ. ಇಲ್ಲಿನ ಅಧಿಕಾರಿಗಳು ಮಾತ್ರ ನೌಕರಿ ಮಾಡಿ ಮನೆಗೆ ಹೋಗುತ್ತಿದ್ದಾರೆ ವಿನಃ ಯಾರೊಬ್ಬರಿಗೂ ಇದರ ಬಗ್ಗೆ ಕಾಳಜಿಯೇ ಇಲ್ಲವಾಗಿದೆ.

ಇನ್ನೂ ದಿನದ 24 ಗಂಟೆಗಳ ಕಾಲ ಮೈಕ್ ಮೂಲಕ ಸ್ವಚ್ಚತೆ ಆದ್ಯತೆ ನೀಡಿ ಎಂದು ಕೂಗಿಕೊಳ್ಳುವ ಅಧಿಕಾರಿಗಳಿಗೆ ಆಗಲಿ, ಕೇಳಿಕೊಂಡು ಸುಮ್ಮನೆ ಹೋಗುವ ಪ್ರಯಾಣಿಕರಿಗೆ ಆಗಲಿ ಯಾವುದೇ ರೀತಿ ಕಾಳಜಿ ಇಲ್ಲದಿರುವುದು ಈ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

Edited By : Manjunath H D
Kshetra Samachara

Kshetra Samachara

16/02/2022 03:10 pm

Cinque Terre

15.33 K

Cinque Terre

0

ಸಂಬಂಧಿತ ಸುದ್ದಿ