ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

SWR: ರೈಲು ಪ್ರಯಾಣಿಕರ ಗಮನಕ್ಕೆ: ಮಾರ್ಗಗಳಲ್ಲಿ ಕೆಲವು ಬದಲಾವಣೆ ಹಾಗೂ ರದ್ದತಿ ಮಾಹಿತಿ

ಬೆಂಗಳೂರು/ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಕೆಲವು ರೈಲುಗಳ ಸೇವೆಯ ರದ್ದತಿ, ಭಾಗಶಃ ರದ್ದತಿ, ರೈಲುಗಳ ನಿಯಂತ್ರಣ ಮತ್ತು ಮಾರ್ಗ ಬದಲಾವಣೆ ಮಾಡಿರುವ ಬಗ್ಗೆ ಪ್ರಕಟಣೆ ಬಗ್ಗೆ ಮಾಹಿತಿ ನೀಡಿದೆ.

ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ಅವರು, ಈ ಕೆಳಕಂಡಂತೆ ಕೆಲ ರೈಲುಗಳನ್ನು ರದ್ದು ಮಾಡಲಾಗಿದೆ. ಇನ್ನೂ ಕೆಲ ರೈಲುಗಳನ್ನು ನಿಯಂತ್ರಿಸಲಾಗಿದೆ. ಜೊತೆಗೆ ಮತ್ತೆ ಕೆಲ ರೈಲುಗಳನ್ನು ಮಾರ್ಗ ಬದಲಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ.

ರೈಲುಗಳ ಸೇವೆಯ ರದ್ದತಿ /ಭಾಗಶಃ ರದ್ದತಿ / ರೈಲುಗಳ ನಿಯಂತ್ರಣ ಮತ್ತು ಮಾರ್ಗ ಬದಲಾವಣೆ ಸಂಶಿ – ಯಲವಿಗಿ ಭಾಗದಲ್ಲಿ ಗುಡಿಗೇರಿ ಮೊದಲನೇ ಹಂತದ ದ್ವಿಪಥ ಕಾಮಗಾರಿಯ ಸಲುವಾಗಿ ದಿನಾಂಕ 18.02.2022 ರಿಂದ 27.02.2022 ರ ವರೆಗೆ ಪ್ರಿ ನಾನ್- ಇಂಟರ್ ಲಾಕಿಂಗ್ ಹಾಗೂ ನಾನ್- ಇಂಟರ್ ಲಾಕಿಂಗ್ ಕಾರ್ಯದ ನಿಮಿತ್ತ ರೈಲುಗಳ ಸೇವೆಯಲ್ಲಿ ಈ ಕೆಳಗಿನಂತೆ ಬದಲಾವಣೆಯನ್ನು ಮಾಡಲಾಗಿದೆ

ರೈಲುಗಳ ಸೇವೆಯ ರದ್ದತಿ

1. ದಿನಾಂಕ 18.02.2022 ರಿಂದ 27.02.2022 ರ ವರೆಗೆ ಚಿತ್ರದುರ್ಗ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07348 ಚಿತ್ರದುರ್ಗ – ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ರದ್ದುಗೊಳಿಸಲಾಗುತ್ತದೆ.

2. ದಿನಾಂಕ 18.02.2022 ರಿಂದ 27.02.2022 ರ ವರೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07347 ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ – ಚಿತ್ರದುರ್ಗ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ರದ್ದುಗೊಳಿಸಲಾಗುತ್ತದೆ.

3. ದಿನಾಂಕ 18.02.2022 ಮತ್ತು 25.02.2022 ರಂದು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07368 ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ – ಅರಸೀಕೆರೆ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲಿನ ಸೇವೆಯನ್ನು ರದ್ದುಗೊಳಿಸಲಾಗುತ್ತದೆ.

4. ದಿನಾಂಕ 18.02.2022 ಮತ್ತು 25.02.2022 ರಂದು ಅರಸೀಕೆರೆ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07367 ಅರಸೀಕೆರೆ – ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲಿನ ಸೇವೆಯನ್ನು ರದ್ದುಗೊಳಿಸಲಾಗುತ್ತದೆ.

ರೈಲು ಸೇವೆಯ ಭಾಗಶಃ ರದ್ದತಿ:

1. ದಿನಾಂಕ 18.02.2022 ರಿಂದ 27.02.2022 ರವರೆಗೆ ರೈಲು ಸಂಖ್ಯೆ 12080 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ – ಕೆ.ಎಸ್.ಆರ್ ಬೆಂಗಳೂರು ನಿತ್ಯ ಸೇವೆಯ ಎಕ್ಸ್ ಪ್ರೆಸ್ ರೈಲಿನ ಸೇವೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಹಾವೇರಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುತ್ತದೆ ಹಾಗೂ ಈ ರೈಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದ ಬದಲಾಗಿ ಹಾವೇರಿ ನಿಲ್ದಾಣದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಹೊರಡುತ್ತದೆ.

2. ದಿನಾಂಕ 18.02.2022 ರಿಂದ 27.02.2022 ರವರೆಗೆ ರೈಲು ಸಂಖ್ಯೆ 12079 ಕೆ. ಎಸ್. ಆರ್ ಬೆಂಗಳೂರು – ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜನಶತಾಬ್ದಿ ನಿತ್ಯ ಸೇವೆಯ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ಹಾವೇರಿ ಮತ್ತು ಶ್ರೀ ಸಿದ್ಧಾರೂಢ ಸ್ವಾಮಿಜಿ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಆದ ಕಾರಣ ಈ ರೈಲಿನ ಸೇವೆಯನ್ನು ಹಾವೇರಿ ನಿಲ್ದಾಣದಲ್ಲಿ ಕೊನೆಗೊಳಿಸಲಾಗುತ್ತದೆ.

3. ದಿನಾಂಕ 19.02.2022 ರಿಂದ 24.02.2022 ರವರೆಗೆ, ದಿನಾಂಕ 26.02.2022 ಹಾಗೂ 27.02.2022 ರ ರೈಲು ಸಂಖ್ಯೆ. 07367 ಅರಸೀಕೆರೆ – ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್ ರೈಲು ರಾಣಿಬೆನ್ನೂರು ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುತ್ತದೆ. ಆದ ಕಾರಣ ಈ ರೈಲಿನ ಸೇವೆಯನ್ನು ರಾಣಿಬೆನ್ನೂರು ನಿಲ್ದಾಣದಲ್ಲಿ ಕೊನೆಗೊಳಿಸಲಾಗುತ್ತದೆ.

4. ದಿನಾಂಕ 17.02.2022 ಹಾಗೂ 24.02.2022 ರಂದು ರೈಲು ಸಂಖ್ಯೆ. 12778 ಕೊಚ್ಚುವೆಲಿ – ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಹಾವೇರಿ ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುತ್ತದೆ. ಹಾಗೂ ಈ ರೈಲಿನ ಸೇವೆಯನ್ನು ಹಾವೇರಿ ನಿಲ್ದಾಣದಲ್ಲಿ ಕೊನೆಗೊಳಿಸಲಾಗುತ್ತದೆ.

5. ದಿನಾಂಕ 19.02.2022 ರಿಂದ 24.02.2022 ರವರೆಗೆ, ದಿನಾಂಕ 26.02.2022 ಮತ್ತು 27.02.2022 ರ ರೈಲು ಸಂಖ್ಯೆ 07368 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ – ಅರಸೀಕೆರೆ ವಿಶೇಷ ಪ್ಯಾಸೆಂಜರ್ ರೈಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ರಾಣಿಬೆನ್ನೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುತ್ತದೆ ಹಾಗೂ ಈ ರೈಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದ ಬದಲಾಗಿ ರಾಣಿಬೆನ್ನೂರು ನಿಲ್ದಾಣದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಹೊರಡುತ್ತದೆ.

ರೈಲುಗಳ ನಿಯಂತ್ರಣ:

1. ದಿನಾಂಕ 17.02.2022 ಮತ್ತು 25.02.2022 ರ ರೈಲು ಸಂಖ್ಯೆ 11022 ತಿರುನೆಲ್ವೇಲಿ – ದಾದರ್ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 50 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

2. ದಿನಾಂಕ 17.02.2022 ಹಾಗೂ 24.02.2022 ರ ರೈಲು ಸಂಖ್ಯೆ 11035 ದಾದರ್- ಮೈಸೂರು ಶರಾವತಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ ಕ್ರಮವಾಗಿ 60 ನಿಮಿಷ ಹಾಗೂ 20 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

3. ದಿನಾಂಕ 18.02.2022 ರ ರೈಲು ಸಂಖ್ಯೆ 11005 ದಾದರ್ – ಪುದುಚೇರಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 60 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

4. ದಿನಾಂಕ 19.02.2022, 22.02.2022, 23.02.2022 ಮತ್ತು 26.02.2022 ರ ರೈಲು ಸಂಖ್ಯೆ 11021 ದಾದರ್ – ತಿರುನೆಲ್ವೇಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 60 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

5. ದಿನಾಂಕ 20.02.2022, 21.02.2022 ಮತ್ತು 25.02.2022 ರ ರೈಲು ಸಂಖ್ಯೆ 11005 ದಾದರ್ – ಪುದುಚೇರಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 20 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

6. ದಿನಾಂಕ 22.02.2022 ಹಾಗೂ 23.02.2022 ರ ರೈಲು ಸಂಖ್ಯೆ 11006 ಪುದುಚೇರಿ – ದಾದರ್ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 30 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

7. ದಿನಾಂಕ 24.02.2022 ರ ರೈಲು ಸಂಖ್ಯೆ 11022 ತಿರುನೆಲ್ವೇಲಿ – ದಾದರ್ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 30 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

8. ದಿನಾಂಕ 26.02.2022 ರ ರೈಲು ಸಂಖ್ಯೆ 11021 ದಾದರ್- ತಿರುನೆಲ್ವೇಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 95 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

9. ದಿನಾಂಕ 12.02.2022 ರ ರೈಲು ಸಂಖ್ಯೆ 17326 ಮೈಸೂರು – ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 40 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

10. ದಿನಾಂಕ 20.02.2022 ಹಾಗೂ 27.02.2022 ರ ರೈಲು ಸಂಖ್ಯೆ 11036 ಮೈಸೂರು – ದಾದರ್ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ ಕ್ರಮವಾಗಿ 50 ನಿಮಿಷ ಹಾಗೂ 120 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

ರೈಲಿನ ಮಾರ್ಗ ಬದಲಾವಣೆ:

1. ದಿನಾಂಕ 19.02.2022 ಮತ್ತು 26.02.2022 ರ ರೈಲು ಸಂಖ್ಯೆ 16544 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ – ಯಶವಂತಪುರ ಎಕ್ಸ್ ಪ್ರೆಸ್ ರೈಲು ಶ್ರೀ ಸಿದ್ಧಾರೂಢ ಸ್ವಾಮಿಜಿ ಹುಬ್ಬಳ್ಳಿ, ಹೊಸಪೇಟೆ, ಕೊಟ್ಟೂರು ಮತ್ತು ದಾವಣಗೆರೆ ನಿಲ್ದಾಣಗಳ ಮಾರ್ಗವಾಗಿ ಬದಲಾದ ಮಾರ್ಗದಲ್ಲಿ ಸಂಚರಿಸುತ್ತದೆ. ಆ ಕಾರಣ ತಪ್ಪಿದ ನಿಲುಗಡೆಗಳು ಹಾವೇರಿ ಮತ್ತು ಹರಿಹರ.

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/02/2022 12:02 pm

Cinque Terre

86.96 K

Cinque Terre

0

ಸಂಬಂಧಿತ ಸುದ್ದಿ