ಹುಬ್ಬಳ್ಳಿ : ಪ್ರತಿಯೊಂದು ಕೆಲಸವನ್ನು ಸಂಬಂಧಪಟ್ಟ ಸಿಬ್ಬಂದಿಗಳೇ ಮಾಡಬೇಕೆಂದು ಎಲ್ಲರೂ ಆಲೋಚನೆ ಮಾಡುವುದು ಸಹಜ. ಅಂತರದಲ್ಲೇ ರೇಲ್ವೆ ಸಿಬ್ಬಂದಿಯೊಬ್ಬರು ಸ್ವತಃ ತಾವೇ ಮಹಾನಗರ ಪಾಲಿಕೆ ಸಿಬ್ಬಂದಿ ಮಾಡಬೇಕಾದ ಕೆಲಸ ಮಾಡಿ, ಈಗ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾರೆ. ಅಷ್ಟಕ್ಕೂ ಅವರ ಮಾಡಿರುವ ಕೆಲಸವನ್ನು ತೋರಸ್ತೇವಿ ನೋಡಿ.
ಹೌದು.....ಕಳೆದ ಮೂರು ನಾಲ್ಕು ದಿನಗಳಿಂದ ಪಾರೆಸ್ಟ್ ಕಾಲೋನಿಯಲ್ಲಿ ಚರಂಡಿ ಓಪನ್ ಆಗಿತ್ತು, ಇದನ್ನು ಮನಗಂಡ ಹುಬ್ಬಳ್ಳಿ ರೇಲ್ವೆ ಸೀನಿಯರ್ ಸೆಕ್ಸೆನ್ ಆಫೀಸರ್ ಅಮೃತ ಸುರೇಶ್ ಹೇರೂರಕರ ಅವರು, ಮಹಾನಗರ ಪಾಲಿಕೆ ಸಿಬ್ಬಂದಿಗಳಗೆ ಕರೆ ಮಾಡದೇ ಸ್ವತಃ ಅರ್ದ ಕಿಲೋಮೀಟರ್ ಹಿಂದುಗಡೆ ಇದ್ದ ಚರಂಡಿ ಕ್ಯಾಪ್ ತಂದು ಮುಚ್ಚಿದ್ದಾರೆ. ಸುಮಾರು ದಿನಗಳಿಂದ ಹೀಗೇ ಕ್ಯಾಪ್ ಓಪನ್ ಆಗಿತ್ತು ಆದರೇ ಯಾರು ಸಹ ಮುಚ್ಚುವ ಕೆಲಸ ಮಾಡಲಿಲ್ಲ. ಇನ್ನೂ ಎಲ್ಲಾ ಕೆಲಸವನ್ನು ಅವರೇ ಮಾಡಬೇಕು ಎನ್ನುವ ಬದಲು ನಾವೂ ಸಹ ಅವರ ಜೊತೆ ಕೈ ಜೋಡಿಸಿದರೆ ಎಲ್ಲಾ ಸಮಸ್ಯೆ ಇತ್ಯರ್ಥ ಆಗುತ್ತದೆ ಎಂದು ಜಾಗೃತಿ ಮೂಡಿಸಿದ್ದಾರೆ.
Kshetra Samachara
05/02/2022 02:39 pm