ನವಲಗುಂದ : ಪಟ್ಟಣದ ಬಸ್ ನಿಲ್ದಾಣ ಸ್ವಚ್ಛಗೊಳ್ಳುತ್ತಿತ್ತು. ಅಷ್ಟೇ ಅಲ್ಲದೆ ಗೋಡೆಗಳ ಮೇಲೆ ಮೂತ್ರ ಮಾಡಿದರೆ ದಂಡ ಎಂಬ ಸೂಚನಾ ಫಲಕವೂ ಗೋಚರಿಸುತ್ತಿತ್ತು. ಈ ಎಲ್ಲಾ ಅಭಿವೃದ್ಧಿಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಕೂಡ ಶ್ರಮಿಸಿದ್ದು, ಇದು ನಿಮ್ಮ ಪಬ್ಲಿಕ್ ನೆಕ್ಸ್ಟ್ ನ ಇಂಪ್ಯಾಕ್ಟ್ ಆಗಿದೆ.
ಎಸ್... ನವಲಗುಂದ ಪಟ್ಟಣದಲ್ಲಿನ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಈಗಾಗಲೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ಹಲವು ಬಾರಿ ಸುದ್ದಿಯನ್ನು ಬಿತ್ತರಿಸಿದ್ದು, ಈಗ ಬಸ್ ನಿಲ್ದಾಣದ ಕಂಪೌಂಡ್ ಬಳಿ ಇರುವ ಚರಂಡಿ ಸ್ವಚ್ಛಗೊಳ್ಳುತ್ತಿದೆ. ಅಲ್ಲಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಈ ಬಗ್ಗೆ ಕಳೆದ ಬಾರಿ ಪುರಸಭೆ ಮುಖ್ಯಾಧಿಕಾರಿಗಳಾದ ವೀರಪ್ಪ ಹಸಬಿ ಅವರು ಬಸ್ ನಿಲ್ದಾಣದ ವ್ಯವಸ್ಥಾಪಕರಿಗೆ ನೋಟಿಸ್ ಜಾರಿ ಮಾಡಿದ್ದರು.
ಈಗ ಇದರ ಪ್ರತಿಫಲ ಎಂಬಂತೆ ಪುರಸಭೆ ಹಾಗೂ ನವಲಗುಂದ ಘಟಕದಿಂದ ಸ್ವಚ್ಛತೆಗೆ ಮುಂದಾಗಿ, ಸೂಚನಾ ಫಲಕಗಳ ಅಳವಡಿಕೆ ಮಾಡಿದ್ದು, ನಿರ್ವಹಣೆ ಮಾಡುವ ಭರವಸೆ ಸಹ ನೀಡಿದ್ದಾರೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ...
Kshetra Samachara
04/02/2022 06:08 pm