ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾಗರ ಕಾಲೋನಿಯಲ್ಲಿ ಸಾಗರದಷ್ಟು ಸಮಸ್ಯೆ: ಇಲ್ಲಿನ ಜನರ ಸಮಸ್ಯೆಗೆ ಸಿಗುತ್ತಿಲ್ಲ ಪರಿಹಾರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರ ಅಂದರೆ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಅಭಿವೃದ್ಧಿ ಹೊಂದಿರುವ ಚಿತ್ರಣ ಕಣ್ಣು ಮುಂದೆ ಬರುತ್ತದೆ. ಬೆಂಗಳೂರ ಮಾದರಿಯಲ್ಲಿ ಅಭಿವೃದ್ಧಿ ಆಗಿದೆ ಎಂಬುವುದು ಹೊರಗಿನವರ ಭಾವನೆ ಆದರೆ ಇಲ್ಲಿನ ಜನರ ಸಮಸ್ಯೆ ನೋಡಿದರೇ ಕುಗ್ರಾಮಕ್ಕಿಂತ ಕಡೆಯಾಗಿ ಇಲ್ಲಿನ ಜನರು ಜೀವಿಸುತ್ತಿದ್ದಾರೆ. ಹಾಗಿದ್ದರೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ಪರಿಚಯಿಸುತ್ತಿದೆ. ಇಲ್ಲಿನ ಜನರ ಸಮಸ್ಯೆ ಹಾಗೂ ಅವರ ಕಣ್ಣೀರಿನ ಕಥೆ.

ಹೌದು... ವಾಣಿಜ್ಯನಗರಿ ಹುಬ್ಬಳ್ಳಿಯ ಕೇಶ್ವಾಪೂರದ ಸಾಗರಕಾಲೋನಿಯ ಸಮಸ್ಯೆ ನೋಡಿದರೇ ನಿಜಕ್ಕೂ ಒಂದು ಕ್ಷಣ ಬೇಸರವಾಗುವುದಂತೂ‌ ಖಂಡಿತ. ಇಲ್ಲಿನ ಜನರು ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡು ಜೀವನ ನಡೆಸುತ್ತಿದ್ದಾರೆ. ಸರಿಯಾದ ರಸ್ತೆಯಿಲ್ಲ. ಬೀದಿ ದ್ವೀಪಗಳಂತೂ ಇಲ್ಲವೇ ಇಲ್ಲ. ಇನ್ನೂ ಚರಂಡಿಗಳ ಬಗ್ಗೆಯಂತೂ ಕೇಳಲೆ ಬೇಡಿ ಇಲ್ಲಿ ಒಂದೆ ಒಂದು ಚರಂಡಿ ಕೂಡ ಇಲ್ಲವಾಗಿದೆ. ಮಳೆಯಾದರೇ ಇಲ್ಲಿ ರಸ್ತೆಯ ಅವ್ಯವಸ್ಥೆಯಿಂದ ಜನರು ಬೇರೆಯವರ ಮನೆಯ ಒಳಗೆ ಹಾದು ಹೋಗಬೇಕಾಗಿದೆ. ಹಾಗಿದ್ದರೇ ಇಲ್ಲಿನ ಸಮಸ್ಯೆಯನ್ನು ಇಲ್ಲಿನ ಜನರ ಬಾಯಿಂದಲೇ ಕೇಳಿ...

ಕೇಳಿದ್ರಲ್ಲ‌ ಇಲ್ಲಿನ ಜನರ ಕಷ್ಟದ ಮಾತು.. ಅಕ್ಷರಶಃ ಇದಕ್ಕಿಂತ ಹತ್ತರಷ್ಟು ಕಷ್ಟಗಳನ್ನು ಇಲ್ಲಿನ ಜನರು ಅನುಭವಿಸುತ್ತಿದ್ದಾರೆ. ಪಾಲಿಕೆಗೆ ಕರ ಪಾವತಿ ಮಾಡಿದರು. ಕಸ ಸಂಗ್ರಹಿಸುವ ವಾಹನ ಇಲ್ಲಿಗೆ ಬರುವುದಿಲ್ಲ. ವಿಧಿ ಇಲ್ಲದೇ ಜನರು ತಾವೇ ತ್ಯಾಜ್ಯ ವಿಲೇವಾರಿ ಮಾಡುವಂತಾಗಿದೆ. ಅಲ್ಲದೆ ನಮ್ಮ ಹುಬ್ಬಳ್ಳಿಗೆ ಎಂತಹ ಯೋಜನೆ ಬಂದರೂ ಇಂತಹ ಅಭಿವೃದ್ಧಿ ಕಾಣದ ಪ್ರದೇಶದ ಬಗ್ಗೆ ಗಮನ ಹರಿಸಿದೇ ಜನಪ್ರತಿನಿಧಿಗಳ ಮನೆ ಹತ್ತಿರ ಹಾಗೂ ತಾವು ಓಡಾಡುವಲ್ಲಿ ಮಾತ್ರ ಅಭಿವೃದ್ಧಿ ಮಾಡುತ್ತಿದ್ದಾರೆ. ಪರಿಸ್ಥಿತಿ ಹೇಗೆ ಆಗಿದೆ ಎಂದರೆ ಇರುವ ಸ್ಮಾರ್ಟ್ ಸಿಟಿ ಯೋಜನೆ ಬಂದರೂ ಇಲ್ಲಿನ ಜನರ ಸಮಸ್ಯೆಗಳಿಗೆ ಸಣ್ಣದಾದ ಸ್ಪಂದನೆ ಕೂಡ ಇಲ್ಲವಾಗಿದೆ.

ಒಟ್ಟಿನಲ್ಲಿ ಜನಪ್ರತಿನಿಧಿಗಳಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಇಲ್ಲಿನ ಜನರ ಸಮಸ್ಯೆಗಳ ಅರಿವಾಗುತ್ತದೆ. ಆದರೆ ಭರವಸೆಯನ್ನು ಅಷ್ಟೇ ಇಲ್ಲಿಯ ಜನ ನೋಡಿದ್ದಾರೆ ವಿನಃ ಇಲ್ಲಿ ನಯಾ ಪೈಸೆ ಅಭಿವೃದ್ಧಿ ಕೂಡ ಆಗಿಲ್ಲ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Nagesh Gaonkar
Kshetra Samachara

Kshetra Samachara

04/02/2022 04:07 pm

Cinque Terre

32.84 K

Cinque Terre

3

ಸಂಬಂಧಿತ ಸುದ್ದಿ