ಅಳ್ನಾವರ : ಅಳ್ನಾವರ ಪಟ್ಟಣ ಪಂಚಾಯಿತಿ ಆವರಣದ ಪಕ್ಕದಲ್ಲೇ ನೀರು ವಿಪರೀತವಾಗಿ ಪೋಲಾಗುತ್ತಿದ್ದರೂ ಯಾರು ಗಮನ ಹರಿಸದೆ ಇದ್ದದ್ದು ಕಂಡು ಬಂದಿದೆ.
ಶುದ್ಧ ಕುಡಿಯುವ ನೀರಿನ ಘಟಕದ ಹಿಂದಿನ ಗೋಡೆ ಇಂದ ನೀರು ಪೋಲಾಗುತ್ತಿದ್ದು, ನೀರು ಹರಿದು ಪಟ್ಟಣ ಪಂಚಾಯಿತಿ ಆವರಣದಲ್ಲಿ ದಾಟಲು ರಸ್ತೆ ಇಲ್ಲದಂತಾಗಿದೆ.
ಅಳ್ನಾವರದ ಜನತೆಗೆ ಮೊದಲಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಇದ್ದು,ಪ್ರತಿ ವರ್ಷ ಬೇಸಿಗೆಯಲ್ಲಿ ಅಳ್ನಾವರದ ಅಕ್ಕ ಪಕ್ಕದ ಹೊಲದಿಂದ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತದೆ.ಇತ್ತ ಕಡೆ ಇದರಿಂದ ಮುಕ್ತಿ ಹೊಂದಲು ಕಾಳಿ ನದಿ ನೀರನ್ನ ಕಾಲುವೆ ಮುಖಾಂತರ ತರುವ ಕಾರ್ಯ ಭರದಿಂದ ಸಾಗಿದೆ.
ಇಷ್ಟೆಲ್ಲ ಗೊತ್ತಿದ್ದರೂ ಇನ್ನು ನೀರಿನ ಬೆಲೆ ತಿಳಿಯದೆ ಈ ರೀತಿ ನೀರನ್ನು ವ್ಯರ್ಥ ಮಾಡುತ್ತಿರುವುದು ಯಾವ ನ್ಯಾಯ?
ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ
Kshetra Samachara
04/02/2022 02:51 pm